ಉಡುಪಿ : ಸೆಪ್ಟೆಂಬರ್ 26: ದೃಶ್ಯ ನ್ಯೂಸ್ : ರೈಲಿನಲ್ಲಿ ಹೆತ್ತವರೊಂದಿಗೆ ಪ್ರಯಾಣಿಸುತ್ತಿದ್ದ ಎಂಟು ವರ್ಷ ಪ್ರಾಯದ ಬಾಲಕ ರೈಲು ಕುಂದಾಪುರ ಬಂದಾಗ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಬಾಲಕ ಮರುಸಾಗರ್ ರೈಲಿನಲ್ಲಿ ತನ್ನ ಹೆತ್ತವರೊಂದಿಗೆ ಅಜ್ಮಿರಿನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದನು. ರೈಲು ಕುಂದಾಪುರ ಬಂದಾಗ ಬಾಲಕ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾನೆ. ಗಾಬರಿಗೊಳಗಾದ ಹೆತ್ತವರು ಉಡುಪಿಯ ರೈಲ್ವೆ ಅಧಿಕಾರಿಗಳಲ್ಲಿ ನೆರವನ್ನು ಯಾಚಿಸಿದ್ದಾರೆ.
ಅಧಿಕಾರಿಗಳು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಒಳಕಾಡು ಅವರು ಬಾಲಕನನ್ನು ಇಂದ್ರಾಳಿಯ ರೈಲು ನಿಲ್ದಾಣದಿಂದ ಮಣಿಪಾಲ ಆಸ್ಪತ್ರೆಗೆ ದಾಖಲುಪಡಿಸಿ ಜೀವರಕ್ಷಕರಾದರು.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕ ಇಂದ್ರಾಳಿಯ ರೈಲ್ವೆ ಅಧಿಕಾರಿಗಳು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡುವರ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರಾಗಿದ್ದಾನೆ.
ರೈಲ್ವೆ ಅಧಿಕಾರಿಗಳು ಹಾಗೂ ಒಳಕಾಡುರವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.