ಮಲ್ಪೆ: ಸೆಪ್ಟೆಂಬರ್ 24 : ದೃಶ್ಯ ನ್ಯೂಸ್ : ಯಾವುದೇ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿದ್ದ ಬಡಾನಿಡಿಯೂರು ಕದಿಕೆ ಗೆಸ್ಟ್ ಹೌಸ್‌ಗೆ ಮಲ್ಪೆ ಪೊಲೀಸರು ದಾಳಿ ನಡೆಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದ ಕಾನೂನು ಬಾಹಿರವಾಗಿ ಸಾರ್ವಜನಿಕರಿಗೆ ಕಾಣುವ ಹಾಗೆ ನೆಲದ ಮೇಲೆ ಕುಳಿತು ಮದ್ಯಸೇವನೆ ಸೇವಿಸುತ್ತಿದ್ದ ಖಚಿತ ಮಾಹಿತಿಯಂತೆ ಮಲ್ಪೆ ಪೊಲೀಸ್ ಠಾಣೆಯ ಎಸ್ ಐ ಶನಿವಾರ ರಾತ್ರಿ ಬಡಾನಿಡಿಯೂರು ಕದಿಕೆಯ ಶಾಂತಿ ಗೆಸ್ಟ್ ಹೌಸ್‌ಗೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಮದ್ಯಪಾನ ಆರೋಪಿಗಳಾದ ಪ್ರಸಾದ್, ಲತೀಶ, ಪ್ರೀತಮ್, ರಂಜಿತ್, ಲೊಕೇಶ್, ಬಾಲರಾಜ್, ಪ್ರದೀಪ್, ಮಿಥುನ್, ಶರತ್ ಅಭಿ, ಸಂದೇಶ, ಅಜ್ಞೆಶ್, ಪರಶು ಎಂಬವರ ಮೇಲೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವುದೇ ಪರವಾನಿಗೆ ಇಲ್ಲದ ಗೆಸ್ಟ್ ಹೌಸ್‌ನಲ್ಲಿದ್ದ ಆರೋಪಿಗಳು ಮಧ್ಯ ಸೇವಿಸುತ್ತಿದ್ದು ಸಾವಿರಾರು ರೂ ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮದ್ಯಪಾನಕ್ಕೆ ಅನುವು ಮಾಡಿಕೊಟ್ಟ ಮಾಲಕ ಸಂದೀಪ ಸಹಿತ 14 ಮಂದಿಯ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2023 ಕಲಂ: 15 KE Act ನಂತೆ ಪ್ರಕರಣ ದಾಖಲಾಗಿದೆ.
ಗೆಸ್ಟ್ ಹೌಸ್, ಹೋಮ್ ಸ್ಟೇ, ರೆಸಾರ್ಟ್‌ಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಹಾಗೂ ಮದ್ಯ ಸೇವನೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಮಲ್ಪೆ ಪೊಲೀಸರು ತಿಳಿಸಿದ್ದಾರೆ.