ಕರ್ನಾಟಕ ಸರಕಾರ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೊಡ್ವೆಸ್ ಸಂಸ್ಥೆ ಶಿರಸಿಯ ಸಹಯೋಗದಲ್ಲಿ ರಚಿತವಾದ ಮಲ್ಪೆ ಮೀನುಗಾರರ ಉತ್ಪದಾಕ ಕಂಪನಿಯ ೨೦೨೨-೨೩ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮವು ದಿನಾಂಕ ೨೨-೦೯-೨೦೨೩ನೇ ಶುಕ್ರವಾರದಂದು ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಶಾಸಕರಾದ ಯಶ್‌ಪಾಲ್ ಎ ಸುವರ್ಣ ಅವರು ಮಾಡಿ ಷೇರು ಪ್ರಮಾಣಪತ್ರವನ್ನು ವಿತರಿಸಿದರು. ಕಂಪನಿಯ ಆಡಳಿತ ಮಂಡಳಿಯ ಪರವಾಗಿ ನೂತನ ಶಾಸಕರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು, ಮೀನುಗಾರರಿಂದ ಮೀನುಗಾರರಿಗಾಗಿಯೇ ರಚಿಸಲ್ಪಟ್ಟ ಕಂಪನಿ ಇದಾಗಿದ್ದು ಮೀನುಗಾರರಿಗೆ ಹೇಚ್ಚಿನ ಉಪಯೋಗವಾಗಲಿದೆ.
ಸರಕಾರದಿಂದ ಮತ್ತು ಮೀನು ಮಾರಾಟ ಫೆಡರೇಶನ್ ವತಿಯಿಂದ ಅಗತ್ಯವಾದ ಸಹಕಾರವನ್ನು ನೀಡುತ್ತೇವೆ ಎಂದು ಭರವಸೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಪನಿಯ ಅಧ್ಯಕ್ಷರಾದ ವನಜಾ ಜೆ ಪುತ್ರನ್ ಅವರು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಮ್ಮ ಕಂಪನಿಯು ಪ್ರಾರಂಭವಾಗಿ ಒಂದು ವರ್ಷ ಮುಕ್ತಾಯ ಗೊಳ್ಳುತ್ತಿದ್ದು ಬಹಳಷ್ಟು ಮೀನಿನ ಉತ್ಪನ್ನಗಳನ್ನು ತಾಯಾರಿಸಿ ಮಾರಾಟ ಮಾಡಲಾಗುತ್ತಿದೆ, ಕಂಪನಿಯ ಕಛೇರಿಗೆ ಮತ್ತು ಕಂಪನಿಯ ಉತ್ಪಾದನಾ ಘಟಕಕ್ಕೆ ಒಂದು ಸುಸಜ್ಜಿತವಾದ ಸ್ಥಳದ ಅವಕಾಶ ಬೇಕಿದ್ದು, ಮಾನ್ಯ ಶಾಸಕರಲ್ಲಿ ಮನವಿಯನ್ನು ಇಟ್ಟರು. ಮುಖ್ಯ ಅತಿಥಿಗಳಾಗಿ ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಮಲ್ಪೆ ಮೀನುಗಾರ ಮಹಿಳೆಯರ ಸಹಕಾರಿ ಸಂಘದ ಅಧ್ಯಕ್ಷರಾದ ಸುಮಿತ್ರ ಕುಂದರ್, ಸ್ಕಾಡ್ವೆಸ್ ಸಂಸ್ಥೆ ಶಿರಸಿ ಇದರ ಉಡುಪಿ ಜಿಲ್ಲಾ ಸಂಯೊಜಕರಾದ ಗಂಗಾಧರ ನಾಯ್ಕ ಉಪಸ್ತಿತರಿದ್ದರು. ಕಂಪನಿಯ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ವಿಷ್ಣುಪ್ರಸಾದ್ ಕೆ ಕಾಮತ್ ಅವರು ಸ್ವಾಗತಿಸಿ, ವಾರ್ಷಿಕ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಪಿಎಮ್‌ಎಫ್‌ಎಮ್‌ಈ ಯೋಜನೆಯ ಮಾಹಿತಿ ಕಾರ್ಯಕ್ರಮವನ್ನು ಜಿಲ್ಲಾ ಸಂಯೋಜಕರಾದ ಸೂರಜ್ ಶೆಟ್ಟಿ ಅವರು ನಡೆಸಿಕೊಟ್ಟರು. ನಿರ್ಧೇಶಕರಾದ ಪೂರ್ಣಿಮ ಪ್ರಾರ್ಥಿಸಿದರೆ, ಇನ್ನೊರ್ವ ನಿರ್ಧೇಶಕರಾದ ಜಯಂತಿ ಕೆ ಸಾಲಿಯಾನ್ ಅವರು ವಂದಿಸಿದರು.