ಮಂಗಳೂರು : ಸೆಪ್ಟೆಂಬರ್ 23: ದೃಶ್ಯ ನ್ಯೂಸ್ : ನಂತೂರ್ ತಿರುವಿನ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳಿಂದ ತುಂಬಿದ್ದು ರಾಜಕಾರಣಿಗಳು ಮಾಡಬೇಕಾದ ಕೆಲಸವನ್ನು ಕೊನೆಗೆ ಪ್ರಯಾಣಿಕರ ಕಷ್ಟನೋಡಲಾರದೆ ಟ್ರಾಫಿಕ್ ಪೊಲೀಸರೇ ಸ್ವತಃ ಗುಂಡಿ ಮುಚ್ಚಿದ ಘಟನೆ ಮಂಗಳೂರಿನ ನಂತೂರು ಜಂಕ್ಷನ್ ನಲ್ಲಿ ನಡೆದಿದೆ..
ಮಂಗಳೂರು ದಕ್ಷಿಣ ವಿಭಾಗದ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಈಶ್ವರ ಸ್ವಾಮಿ , ಎಎಸ್‌ಐ ವಿಶ್ವನಾಥ ರೈ ಅವರು ಹಾರೆ, ಗುದ್ದಲಿ ಹಿಡಿದು ಈ ದುರಸ್ತಿ ಕಾರ್ಯವನ್ನು ಮಾಡಿದ್ದಾರೆ.
ಪ್ರಮುಖ ಅಪಘಾತ ವಲಯವೆಂದೇ ಗುರುತ್ತಿಲ್ಪಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಈ ಮುಖ್ಯ ಭಾಗದ ತಿರುವಿನ ರಸ್ತೆ ಕಳೆದ ಕೆಲವು ತಿಂಗಳುಗಳಿಂದ ಹೊಂಡ ಗುಂಡಿಗಳಿಂದ ತುಂಬಿ ದುರಸ್ತಿಯಲ್ಲಿತ್ತು. ಒಂದೆರಡು ಬಾರಿ ಇಲ್ಲಿ ತೇಪೆ ಹಾಕುವ ಕಾರ್ಯ ಮಾತ್ರ ನಡೆದಿದ್ದು ಮತ್ತೆ ಯಾಥಾ ಸ್ಥಿತಿ ಮುಂದುವರೆದು ವಾಹನ ಸವಾರರು ಅದರಲ್ಲೂ ದ್ವಿಚಕ್ರ ಸವಾರರು ಜೀವ ಕೈಯಲ್ಲಿ ಹಿಡಿದೇ ವಾಹನ ಚಲಾಯಿಸಬೇಕಿತ್ತು.
ನಗರ ರಸ್ತೆಗಳೊಂದಿಗೆ 2 ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕೂಡ ಇಲ್ಲಿ ಹಾದು ಹೋಗುವುದರಿಂದ ಸಂಚಾರ ವ್ಯವಸ್ಥೆಗೂ ಭಾರಿ ತೊಂದರೆ ಆಗುತ್ತಿದ್ದು. ಜೊತೆಗೆ ಪೊಲೀಸ್ ಸಿಬಂದಿ ಕೂಡ ಜೀವ ಕೈಯಲ್ಲಿ ಹಿಡಿದೇ ಕರ್ತವ್ಯ ಮಾಡಬೇಕಾಗಿತ್ತು.
ಹೊಂಡ ಗುಂಡಿಗಳಿಂದ ಸುಗಮ ವಾಹನ ಸಂಚಾರಕ್ಕೂ ದಿನಾ ತೊಂದರೆಯಾಗುತ್ತಿದ್ದು ಟ್ರಾಫಿಕ್ ಬ್ಲಾಕ್ ಇಲ್ಲಿ ನಿತ್ಯ ನಿರಂತರವಾಗಿತ್ತು. ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದೇ ಸ್ವತಃ ಪೊಲೀಸ್ ಅಧಿಕಾರಿಗಳಾದ ಈಶ್ವರ ಸ್ವಾಮೀ, ವಿಶ್ವನಾಥ ರೈ ಅವರು ಫೀಳ್ಡಿಗಿಳಿದು ಕಾಂಕ್ರೀಟ್ ತರಿಸಿ ಹೊಂಡ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿದ್ದು, ಪೋಲೀಸರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.