ಉಡುಪಿ :ಆಟೋರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ (ರಿ)ಮಣಿಪಾಲ ಇದರ ಸದಸ್ಯರಾದ ಸತೀಶ್ ಎಂ 𝙺𝙰20 ಡಿ 5055 ಎಂಬುವರ ರಿಕ್ಷಾದಲ್ಲಿ 𝙷 ಅನಂತ್ ದೇವಾಡಿಗ ಎಂಬುವರ ಮಗ ದಿನಾಂಕ 18/9/2023ರ ಶನಿವಾರ 12:30ಕ್ಕೆ ಮಣಿಪಾಲದಿಂದ ಉಡುಪಿಗೆ ಬಾಡಿಗೆ ಮಾಡಿಕೊಂಡು ತೆರಳಿರುತ್ತಾರೆ ಆ ಸಮಯದಲ್ಲಿ ಅವರ ಅರಿವಿಗೆ ಬಾರದೆ ತಮ್ಮ ಅಮೂಲ್ಯವಾದ ಚೆಕ್ ಹಾಗೂ ದಾಖಲಾತಿಗಳನ್ನು ಬಿಟ್ಟಿರುತ್ತಾರೆ. ಇದು ಸತೀಶ್ ಅವರಿಗೂ ಅರಿವಿಗೆ ಬಾರದೆ ಅವರು ಮಣಿಪಾಲಕ್ಕೆ ಮರಳಿ ಬರುವಾಗ ತಮ್ಮ ರಿಕ್ಷಾದಲ್ಲಿ ಅನಂತ್ 𝙷 ಅಮೂಲ್ಯವಾದ ದಾಖಲಾತಿ ಹಾಗೂ ಚಕ್ ಇರುವುದನ್ನು ಮನಗೊಂಡು ಸತೀಶ್ ಅವರು ಅಧ್ಯಕ್ಷರಾದ ವಿಜಯ್ ಪುತ್ರನ್ ಹಿರೇಬೆಟ್ಟು ಇವರಿಗೆ ವಿಷಯವನ್ನು ತಿಳಿಸಿದಾಗ ವಿಜಯ್ ಪುತ್ರನ್ ಇವರು ಸಂಬಂಧಿಸಿದ ವ್ಯಕ್ತಿಗೆ ದಾಖಲೆ ಹಾಗೂ ಚೆಕ್ಕನ್ನು ಮರಳಿ ನೀಡುವಲ್ಲಿ ಮುಂದಾಳುತ್ವವನ್ನು ವಹಿಸಿರುತ್ತಾರೆ ಸತೀಶ್ ಎಂ 7 ಲಕ್ಷ ರೂಪಾಯನ್ನು ಸಂಬಂಧಿಸಿದ ವ್ಯಕ್ತಿಗೆ ನೀಡುವ ಮುಖೇನ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿರುತ್ತಾರೆ
ಸಂಬಂಧಿಸಿದ ದಾಖಲಾತಿಗಳನ್ನು ನೀಡುವಲ್ಲಿ ಮಣಿಪಾಲ ಠಾಣಾಧಿಕಾರಿಯದ ದೇವರಾಜ್ ಹಾಗೂ ಪಿಎಸ್ಐ ಅಕ್ಷಯ ಕುಮಾರಿ ಇವರ ಸಹಭಾಗಿತ್ವದಲ್ಲಿ ರಾಘವೇಂದ್ರ ಸಿ ಎಸ್ ಐ ಹಾಗೂ ಮನೋಹರ್ ಕುಮಾರ್ ಎಎಸ್ಐ ಇವರ ಮುಖೇನ ಚಕ್ ಹಾಗೂ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡಂತಹ ಅನಂತ್ ದೇವಾಡಿಗ ಇವರಿಗೆ ಹಸ್ತಾಂತರಿಸುವಲ್ಲಿ ಪ್ರಧಾನ ಕಾರ್ಯದರ್ಶಿಯಾದ ಸಂತೋಷ್ ಶೆಟ್ಟಿ ನಿಲ್ದಾಣದ ನಾಯಕರುಗಳಾದ ಸಂಜೀವ್ ಪೂಜಾರಿ ಅಶ್ರಫ್ ಸಹಕರಿಸಿರುತ್ತಾರೆ