ಬಂಟ್ವಾಳ: ಸೆಪ್ಟೆಂಬರ್ 22: ದೃಶ್ಯ ನ್ಯೂಸ್ : ಸ್ಥಳೀಯ ನಿವಾಸಿಯೋರ್ವ ಪಕ್ಕದ ಮನೆಯೊಂದರ ಕೋಣೆಯ ಕಿಟಕಿ ತೆಗೆದು ಯುವತಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಘಟನೆ ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಎಂಬಲ್ಲಿ ನಡೆದಿದೆ.
ಈ ಬಗ್ಗೆ ಯುವತಿಯು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ರಾತ್ರಿ 10 ಗಂಟೆಯ ಬಳಿಕ ಸ್ಥಳೀಯ ನಿವಾಸಿಯಾದ ವಿಶ್ವನಾಥ ಎಂಬವನು ಪಕ್ಕದ ಮನೆಯ ಕೋಣೆಯ ಕಿಟಕಿಯ ಪರದೆ ಸರಿಸಿ ಕಿಟಕಿ ಮೂಲಕ ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಇಣುಕಿ ನೋಡುತ್ತಿದ್ದು, ಇದನ್ನು ಗಮನಿಸಿದ ಯುವತಿಯು ಜೋರಾಗಿ ಕಿರುಚಿದಾಗ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.