ಹೆಬ್ರಿ: ಸೆಪ್ಟೆಂಬರ್ 22: ದೃಶ್ಯ ನ್ಯೂಸ್ : ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಹಾಗೂ ಹಿಂದೂ ಹೆಲ್ಪ್ ಲೈನ್ ಮುನಿಯಾಲು ವತಿಯಿಂದ ಮುನಿಯಾಲಿನ ಮಗು ಅಮೂಲ್ಯಳ ಚಿಕಿತ್ಸೆಗೆ ರೂ.7 ಲಕ್ಷ ಧನಸಹಾಯವನ್ನು ಹಸ್ತಾಂತರಿಸಲಾಯಿತು.
ವಿಷೇಶವಾಗಿ ಈ ಮಗುವಿನ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಅರ್ಜುನ್ ಬಂಡಾರ್ಕರ್ ಇವರಿಗೆ ಮುನಿಯಾಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಸಭಾ ಕಾರ್ಯಕ್ರಮದಲ್ಲಿ ಅಭಿನಂದಿಸಿ ಮಗುವಿನ ಹೆತ್ತವರಿಗೆ ಚೆಕ್ಕನ್ನು ಹಸ್ತಾಂತರಿಸಲಾಯಿತು.