ಮಂಗಳೂರು: ಸೆಪ್ಟೆಂಬರ್ 21: ದೃಶ್ಯ ನ್ಯೂಸ್ : ಉದ್ಯಮಿಗೆ ಚೈತ್ರಾ ಕುಂದಾಪುರ
ವಂಚಿಸಿದ ಪ್ರಕರಣಕ್ಕೂ ಬಜರಂಗದಳ ಸಂಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಚೈತ್ರ ಕುಂದಾಪುರ ನಮ್ಮ ಸಂಘಟನೆಯವರಲ್ಲ. ಅವರ ಭಾಷಣಕ್ಕಾಗಿ ಕರೆಸಿಕೊಳ್ಳುತ್ತಿದ್ದೆವು. ಇಂತಹ ಕೃತ್ಯಗಳಿಗೆ ನಮ್ಮ ಸಂಘಟನೆ ಆಸ್ಪದ ಕೊಡುವುದಿಲ್ಲ. ಎರಡು ತಿಂಗಳ ಹಿಂದೆಯೇ ಈ ಘಟನೆ ನನ್ನ ಗಮನಕ್ಕೆ ಬಂದಿತ್ತು. ವಜ್ರದೇಹಿ ಮಠದ ಸ್ವಾಮೀಜಿ ನನ್ನೊಂದಿಗೆ ವಿಚಾರವನ್ನ ಹಂಚಿಕೊಂಡಿದ್ದರು. ನಿಮ್ಮ ಪಾತ್ರ ಇಲ್ಲವೆಂದ ಮೇಲೇ ತಲೆ ಕೆಡಿಸಿಕೊಳ್ಳಬೇಡಿ ಎಂದು ಸ್ವಾಮೀಜಿಯವರಿಗೂ ಹೇಳಿದ್ದೆ ಎಂದು ಶರಣ್ ಹೇಳಿದರು.
ಶೌರ್ಯ ಯಾತ್ರೆ: ಲವ್ ಜಿಹಾದ್, ಗೋಹತ್ಯೆ ಮತಾಂತರ ವಿರುದ್ಧ ಬಜರಂಗದಳ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆ ನಡೆಸಲಿದೆ ಎಂದು ಶರಣ್ ಪಂಪ್‌ವೆಲ್ ಇದೇ ವೇಳೆ ತಿಳಿಸಿದರು.