ಗಂಗೊಳ್ಳಿ : ಮಗ ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ, ಅಮ್ಮ ಉಡುಪಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಮೂರು ವರ್ಷಗಳಿಂದ ಮಗ ತಾಯ್ನಾಡಿಗೆ ಬಂದಿರಲಿಲ್ಲ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದಿದ್ದ ಆತ ಅಮ್ಮನ ಬಳಿ ಮೀನು ವ್ಯಾಪಾರ ಮಾಡಿದ್ದಾನೆ. ಈ ವೇಳೆ ಆತನ ಹಾವಭಾವ ನೋಡಿ ತನ್ನ ಮಗನೇ ಎಂದು ತಾಯಿ ಗುರುತು ಹಿಡಿದಿದ್ದಾಳೆ. ಇಬ್ಬರು ಭಾವುಕರಾಗಿ ತಬ್ಬಿಕೊಂಡಿದ್ದಾರೆ.
ಈ ಘಟನೆ ನಡೆದಿದ್ದು ಉಡುಪಿಯ ಗಂಗೊಳ್ಳಿ ಬದರಿನ ಬಳಿ. ಉಡುಪಿ ಜಿಲ್ಲೆ ಗಂಗೊಳ್ಳಿ ನಿವಾಸಿ ರೋಹಿತ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಮೂರು ವರ್ಷಗಳ ನಂತರ ಸ್ವಗ್ರಾಮಕ್ಕೆ ಬಂದಿದ್ದ. ಆದ್ರೆ ಬರುವ ಮಾಹಿತಿಯನ್ನು ತಾಯಿಗೆ ನೀಡಿರಲಿಲ್ಲ. ನೇರವಾಗಿ ಮನೆಗೆ ಬಂದಾಗ ತಾಯಿ ಅಲ್ಲಿರಲಿಲ್ಲ. ಹೀಗಾಗಿ ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾನೆ. ತಾಯಿ ಸುಮಿತ್ರಾ ಮೀನು ಮಾರುತ್ತಿದ್ದುದನ್ನು ನೋಡಿ ರೋಹಿತ್, ತಲೆಗೆ ಟೋಪಿ, ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕನ್ನಡಕ ಹಾಕಿ, ಮೀನು ಖರೀದಿ ಮಾಡುವ ನಾಟಕ ಮಾಡಿದ್ದಾನೆ. ಆದ್ರೆ ತಾಯಿ ಅದು ತನ್ನ ಮಗನೇ ಎಂದು ಗುರುತಿಸಿದ್ದಾಳೆ.
ಈ ದೃಶ್ಯಗಳನ್ನು ವಿಡಿಯೋ ಮಾಡಲಾಗಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ