ಶಿರ್ವ: ಸೆಪ್ಟೆಂಬರ್ 21: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಶಿರ್ವ ಸಮೀಪದ ಬೆಳಪು ಗ್ರಾಮದ ಮಲೆ ಜುಮಾದಿ ದೈವಸ್ಥಾನದ ಬಳಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಶಿರ್ವ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಬ್ರಹ್ಮಾವರ ಬೈಕಾಡಿ ಪಡು ತೆಂಕುಮನೆ ನಿವಾಸಿ ಅರುಣ್ ಶೆಟ್ಟಿ (41), ಪಾಂಗಾಳ ಗುಡ್ಡೆ ಅಕ್ಕು ತೋಟ ನಿವಾಸಿ ಸುರೇಶ್ ಪೂಜಾರಿ (55), ಮೂಳೂರು ದಡ್ಡಿನಗುಜ್ಜಿ ಗೋಪಾಲ ನಿಲಯ ನಿವಾಸಿ ನಿಕ್ಷಿತ್(19), ಉಚ್ಚಿಲ ಬಡ ಗ್ರಾಮ ಭಾಸ್ಕರ್ ನಗರ ನಿವಾಸಿ ರವಿ ಪೂಜಾರಿ(47) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 6900 ರೂಪಾಯಿ ಹಾಗೂ ಅಕ್ರಮ ಕೋಳಿ ಅಂಕಕ್ಕೆ ಬಳಸಲಾದ ಕೋಳಿಗಳನ್ನು ಹಾಗೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.