ಕಾಪು : ಸೆಪ್ಟೆಂಬರ್ 20: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕೈಪುಂಜಾಲು ನಿವಾಸಿ ಶಿವಣ್ಣ ಗುರಿಕಾರರವರು ಅನಾರೋಗ್ಯ (ಪಕ್ಷಿವಾತ)ದಿಂದ ಬಳಲುತ್ತಿದ್ದು, ಕರ್ನಾಟಕ ರಕ್ಷಣಾ ವೇದಿಕೆ(ರಿ.) ಉಡುಪಿ ಜಿಲ್ಲಾ ಘಟಕ ಮತ್ತು ಕಾಪು ತಾಲೂಕು ಘಟಕದ ಪದಾಧಿಕಾರಿಗಳು ಅವರ ಮನೆಗೆ ತೆರಳಿ, ಹತ್ತು (10,000/-) ಸಾವಿರ ರೂಪಾಯಿ ಧನ ಸಹಾಯವನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ, ಮಹಿಳಾ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಕೃಷ್ಣ ಪಾಂಗಾಳ, ಕಾಪು ತಾಲೂಕು ಅಧ್ಯಕ್ಷರಾದ ಆನಂದ್ ಶೆಟ್ಟಿ, ಕಾಪು ತಾಲೂಕು ಮಹಿಳಾ ಅಧ್ಯಕ್ಷರಾದ ಶಶಿಕಲಾ ನವೀನ್, ಕಾಪು ತಾಲೂಕು ಮಹಿಳಾ ಉಪಾಧ್ಯಕ್ಷರಾದ ಗೌರಿ, ಹಾಗೂ ಶಿವಣ್ಣನ ಹೆಂಡತಿ ಮುತ್ತು, ಮಗಳಾದ ಸರೋಜ ಉಪಸ್ಥಿತರಿದ್ದರು.