ಬೆಳಗಾವಿ: ಸೆಪ್ಟೆಂಬರ್ 20: ದೃಶ್ಯ ನ್ಯೂಸ್ : ವಿದ್ಯುತ್ ತಂತಿ ಸ್ಪರ್ಶಿಸಿ ದಂಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಹೆಸ್ಕಾಂ ವತಿಯಿಂದ 10 ಲಕ್ಷ ರೂ. ಪರಿಹಾರ ಬಿಡುಗಡೆಯಾಗಿದ್ದು, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬುಧವಾರ ಚೆಕ್ ಹಸ್ತಾಂತರಿಸಿದರು.
ಕೆಲವು ದಿನಗಳ ಹಿಂದೆ ಬಿಜಗರಣಿ ಗ್ರಾಮದ ಲತಾ ದೇಸಾಯಿ ಹಾಗೂ ಅಮಿತ್ ದೇಸಾಯಿ ದಂಪತಿಗೆ ಹೊಲದಲ್ಲಿ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಮೃಪತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ವತಿಯಿಂದ 10 ಲಕ್ಷ ರೂ.ಗಳ ಪರಿಹಾರ ನೀಡಲಾಗಿದೆ.
ಚೆಕ್ ನ್ನು ಮೃತ ಲತಾ ದೇಸಾಯಿ ಅವರ ತಾಯಿಯವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಸ್ತಾಂತರ ಮಾಡಿದರು.