ಉಡುಪಿ: ಸೆಪ್ಟೆಂಬರ್ 20: ದೃಶ್ಯ ನ್ಯೂಸ್ : ನಗರದ ಗುಂಡಿಬೈಲ್ ಸೀಮಾ ಪೆಟ್ರೋಲ್ ಪಂಪ್ ಎದುರು ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ವ್ಯಕ್ತಿಯೊಬ್ಬರು ಕುಸಿದು ಬಿದ್ದ ಪರಿಣಾಮ ಅವರ ಮುಖ ಹಾಗೂ ತಲೆಯ ಹಿಂಬದಿ ಗಂಬೀರ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದರು. ವ್ಯಕ್ತಿಯ ಅಸಹಾಯಕ ಸ್ಥಿತಿ ಕಂಡ ಸಾರ್ವಜನಿಕರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ಸಾರ್ವಜನಿಕರ ಮನವಿಗೆ ತಕ್ಷಣ ಸ್ಪಂದಿಸಿದ ಒಳಕಾಡು ವ್ಯಕ್ತಿಯನ್ನು ರಕ್ಷಿಸಿ ಸಮಾಜ ರಕ್ಷಿಸಿ ಅಜ್ಜರ ಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವೀಯತೆ ಮೆರೆದಿದ್ದಾರೆ.
ವ್ಯಕ್ತಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಹೆಸರು ಹಾಗೂ ವಿಳಾಸ ತಿಳಿದುಬಂದಿಲ್ಲ. ಸಂಬಂಧಪಟ್ಟವರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.