ಬೆಂಗಳೂರು :ಜನರಿಗೆ ಸುಲಭವಾಗಿ ಸಂಪರ್ಕಕ್ಕೆ ಸಿಗುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ, Chief Minister Of Karnataka ಎಂಬ ಹೆಸರಿನಲ್ಲಿ ವ್ಯಾಟ್ಸಾಪ್ ಚ್ಯಾನೆಲ್ ಗೆ ಎಂಟ್ರಿ ಕೊಟ್ಟಿದ್ದಾರೆ.
ವಾಟ್ಸ್‌ಅಪ್ ಹೊಸ ಫೀಚರ್‌ನನ್ನು(feature) ಬಿಡುಗಡೆಗೊಳಿಸಿತ್ತು. ಈ ಫೀಚರ್‌ನಲ್ಲಿ ವಾಟ್ಸ್ಯಾಪ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಒಂದೇ ವೇದಿಕೆಯಲ್ಲಿ ಮಾಹಿತಿ ರವಾನಿಸುವ ಚ್ಯಾನೆಲ್ ಇದಾಗಿದೆ.
ಸೆ. 13 ರಂದು ಈ ವಾಟ್ಸ್ಯಾಪ್ ಚ್ಯಾನೆಲ್‌ಗೆ ಸಿಎಂ ಎಂಟ್ರಿ ಕೊಟ್ಟಿದ್ದು ಈಗಾಗಲೇ 60 ಸಾವಿರಕ್ಕೂ ಅಧಿಕ ಫಾಲೋವರ್ಸ್(Followers) ಪಡೆದಿದ್ದಾರೆ.
ಈ ಚ್ಯಾನೆಲ್‌ನಲ್ಲಿ ಸರ್ಕಾರದ ಯೋಜನೆಗಳು, ಮುಖ್ಯಮಂತ್ರಿಗಳ ಕಾರ್ಯಕ್ರಮ, ಸರ್ಕಾರದ ದೈನಂದಿನ ಆಗುಹೋಗುಗಳ ಮಾಹಿತಿ ಪಡೆಯಬಹುದಾಗಿದೆ. ವಾಟ್ಸ್ಯಾಪ್ ಚ್ಯಾನೆಲ್ ಲಿಸ್ಟ್‌ನಲ್ಲಿ ನೀವು ಕೂಡ ಸಿಎಂ ಚ್ಯಾನೆಲ್‌ನ್ನು ಫಾಲೋ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.