ನವದೆಹಲಿ(ಸೆ.19) ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಲು ಪ್ರಧಾನಿ ನರೇಂದ್ರ ಮೋದಿ ವ್ಯಾಟ್ಸ್‌ಆಯಪ್ ಚಾನೆಲ್ ಸೇರಿಕೊಂಡಿದ್ದಾರೆ. ಇದೀಗ ನರೇಂದ್ರ ಮೋದಿ ಗ್ರೂಪ್ ಚಾನೆಲ್ ಆರಂಭಗೊಂಡಿದೆ. ಈ ಮೂಲಕ ಜನಸಾಮಾನ್ಯರ ಜೊತೆ ಸಂವನ, ಯೋಜನೆ, ಸರ್ಕಾರ ಘೋಷಣೆಗಳ ಮಾಹಿತಿ ನೇರವಾಗಿ ಪ್ರಧಾನಿ ಮೋದಿಯಿಂದ ಜನರಿಗೆ ತಲುಪಲಿದೆ.
ಇದೀಗ ಮೋದಿ ವ್ಯಾಟ್ಸ್‌ಆಯಪ್ ಚಾನೆಲ್ ಸೇರಿಕೊಂಡಿದ್ದಾರೆ. ಈ ಕುರಿತು ತಮ್ಮ ನರೇಂದ್ರ ಮೋದಿ ವ್ಯಾಟ್ಸ್‌ಆಯಪ್ ಚಾನೆಲ್ ಗ್ರೂಪ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ನಾನು ವ್ಯಾಟ್ಸ್‌ಆಯಪ್ ಕಮ್ಯೂನಿಟಿ ಸೇರಿಕೊಳ್ಳಲು ಉತ್ಸುಕನಾಗಿದ್ದೇನೆ. ಇದು ಜನಸಾಮಾನ್ಯರ ಜೊತೆ ಮತ್ತಷ್ಟು ಹತ್ತಿರವಾಗಿ ಸಂವನಹ ನಡೆಸಲು ಮತ್ತೊಂದು ಹೆಜ್ಜೆಯಾಗಿದೆ. ಇನ್ನು ನಾವೆಲ್ಲ ಸಂಪರ್ಕದಲ್ಲಿರೋಣ. ಇಲ್ಲಿ ಹೊಸ ಸಂಸತ್ ಭವನದ ಚಿತ್ರವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಮೋದಿ ಮೊದಲ ಸಂದೇಶ ಹಂಚಿಕೊಂಡಿದ್ದಾರೆ.
ವ್ಯಾಟ್ಸ್‌ಆಯಪ್ ಬಳಕೆದಾರರು ನರೇಂದ್ರ ಮೋದಿ ವ್ಯಾಟ್ಸ್‌ಆಯಪ್ ಕಮ್ಯೂನಿಟಿ ಚಾನೆಲ್ ಸೇರಿಕೊಳ್ಳಲು ಸಾಧ್ಯವಿದೆ. ಮೋದಿ ಕಮ್ಯೂನಿಟಿ ಚಾನೆಲ್ ಗ್ರೂಪ್ ಭಾಗವಾಗಲು ಒಂದು ಲಿಂಕ್ ನೀಡಲಾಗಿದೆ. ಈ ಲಿಂಕ್ ಕ್ಲಿಕ್ ಮಾಡಿ ಗ್ರೂಪ್ ಸೇರಿಕೊಳ್ಳಬುಹುದು.
https://whatsapp.com/channel/0029Va8IaebCMY0C8oOkQT1F