ಉಡುಪಿ : ಸೆಪ್ಟೆಂಬರ್ 19: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಪರಿಸರಸ್ನೇಹಿ ಬೆಲ್ಲದ ಗಣಪತಿಯ ಪ್ರದರ್ಶನವು ಮಾರುಥಿ ವೀಥಿಕಾ ಇಲ್ಲಿರುವ ಸಮಿತಿಯ ಕಛೇರಿಯ ಮುಂಭಾಗ ಹಾಕಿರುವ ಪ್ರದರ್ಶನ ಮಂಟಪದಲ್ಲಿ ಎರ್ಪಡಿಸಲಾಗಿದೆ.
ಪರಿಸರ ಸ್ನೇಹಿ ಬೆಲ್ಲದ ಗಣಪತಿ ಪ್ರದರ್ಶನವನ್ನು ಪರಿಸರ ತಜ್ಞ, ಡಾ. ಸತೀಶ್ ನಾಯ್ಕ್, ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಬಾಸ್ಕರ ಶೇರಿಗಾರ್, ಜೋಸ್ ಆಲುಕಾಸ್ ನ ಮ್ಯಾನೇಜರ್ ರಾಜೇಶ್ ಎನ್ ಆರ್, ಗೋಪಾಲ್, ಭೀಮಾ ಜುವೆಲ್ಲರ್ಸ್ ನ ಅಷ್ಮತ್ ರಾವ್, ಶ್ರೀನಿಧಿ ಭಟ್, ಕೊಟೆಕ್ ಮಹೇಂದ್ರ ಬ್ಯಾಂಕ್ ಸಿಬ್ಬಂಧಿ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.
ಪರಿಸರ ಸ್ನೇಹಿ ಬೆಲ್ಲದ ಗಣಪತಿ ಪ್ರದರ್ಶನವು ಸೆಪ್ಟೆಂಬರ್ 19 ಮಂಗಳವಾರದಿಂದ ಸೆಪ್ಟೆಂಬರ್ 21 ಗುರುವಾರದ ವರೆಗೆ ಇರಲಿದೆ ಎಂದು ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ತಿಳಿಸಿದ್ದಾರೆ.