ಪಡುಬಿದ್ರಿ:ಕಾರೊಂದು ಓವರ್ಟೇಕ್ ಮಾಡುವ ಭರದಲ್ಲಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಎರಡೂ ಕಾರುಗಳು ಗದ್ದೆಗೆ ಉರುಳಿದ ಘಟನೆ ಪಡುಬಿದ್ರಿಯ ಅಲಂಗಾರು ಬಳಿ ನಡೆದಿದೆ.
ಅಪಘಾತಕ್ಕೆ ತುತ್ತಾದ ಕಾರುಗಳು ಕುಂದಾಪುರ ಮೂಲದ ಐ ಟೆನ್ ಕಾರು ಹಾಗೂ ಕೋಟ ಮೂಲದ ಶಿಪ್ಟ್ ಕಾರು ಎಂದು ತಿಳಿದು ಬಂದಿದೆ
ಚಾಲಕರು ಮಾತ್ರ ಎರಡೂ ಕಾರುಗಳಲ್ಲಿ ಇದ್ದರು ಎನ್ನಲಾಗಿದೆ, ಶಿಪ್ಟ್ ಕಾರಿನ ಚಾಲಕ ಗಾಯಗೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ,
ಹೆದ್ದಾರಿ ಬಹಳ ಅಪಾಯಕಾರಿ ತಿರುವು ಹೊಂದಿದ್ದು, ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮೊದಲು ಸಿಂಗಲ್ ರಸ್ತೆ ಇರುವಾಗಲೂ ಈ ತಿರುವಿನಲ್ಲಿ ಬಹಳಷ್ಟು ಅಪಘಾತಗಳು ಸಂಭವಿಸಿ ಪ್ರಾಣಹಾನಿ ಸಂಭವಿಸಿದೆ.
ಈ ಭಾಗದಲ್ಲಿ ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಪಕ್ಕದ ಗದ್ದೆಗೆ ಉರುಳುತ್ತಿದ್ದರೂ ಹೆದ್ದಾರಿ ಇಲಾಖೆ ತನಗೆ ಸಂಬಂಧವೇ ಇಲ್ಲದಂದೆ ವರ್ತಿಸುತ್ತಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪ. ಹೆಜಮಾಡಿ ಟೋಲ್ ಸಿಬ್ಬಂದಿಗಳು ವಾಹನಗಳ ತೆರವು ಕಾರ್ಯ ನಡೆಸಿದರು. ಪಡುಬಿದ್ರಿ ಪೊಲೀಸರು ಪರಿಶೀಲನೆ ನಡೆಸಿ ವಾಹನಗಳನ್ನು ಠಾಣೆಗೆ ಸಾಗಿಸಿದ್ದಾರೆ.