ಗಂಗೊಳ್ಳಿ :ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಚಗಂಗಾವಳಿ ಹೊಳೆಯ ನೀರಿಗೆ ಯಾರೋ ಕಿಡಿಗೇಡಿಗಳು ಗೋವನ್ನು ಎಲ್ಲಿಂದಲೋ ಕದ್ದು ತಂದು ವಧೆ ಮಾಡಿ ಅದರ ಕಳೇಬರಹಗಳನ್ನು ಎಸೆದಿರುವ ಘಟನೆ ನಡೆದಿದೆ.
ಹೊಳೆಯ ದಡದಲ್ಲಿ ಗೋವಿನ ಚರ್ಮ ಹಾಗೂ ತಲೆಯ ಬುರುಡೆ ಪತ್ತೆಯಾಗಿದೆ.
ಈ ಕುರಿತು ಗಂಗೊಳ್ಳಿಯ ದೊಡ್ಡಹಿತ್ತು ನಿವಾಸಿ ಅನುಪ್ ಖಾರ್ವಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.