ಹೆಬ್ರಿ: ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಹೆಬ್ರಿಯಲ್ಲಿ
ಗಣೇಶೋತ್ಸವ ಹಾಗೂ ಮುಂಬರುವ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಕಾನೂನು ಸುವಸ್ಥೆ ಕಾಪಾಡವ ಸಲುವಾಗಿ ಸೋಮವಾರ ಹೆಬ್ರಿ ಮುಖ್ಯ ರಸ್ತೆಯಲ್ಲಿ ರೂಟ್ ಮಾರ್ಚ್ ನಡೆಯಿತು.
ಹೆಬ್ರಿ ಪೊಲೀಸ್ ಠಾಣೆ ಮತ್ತು ಅಜೆಕಾರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ರೂಟ್ ಮಾರ್ಚ್ ನಡೆಸಿದರು.
ಪೊಲೀಸ್ ಪಿಎಸ್ಐಗಳಾದ ಹೆಬ್ರಿಯ ಮಹೇಶ್ ಟಿ.ಎಂ. ಅಜೆಕಾರಿನ ರವಿ ಬಿ. ಎಸ್ ಹಾಗೂ ಲಕ್ಷ್ಮಣ್ ಇವರ ನೇತೃತ್ವದಲ್ಲಿ ರೂಟ್ ಮಾರ್ಚ್ ಯಶಸ್ವಿಯಾಗಿ ನಡೆಯಿತು.