ಉಡುಪಿ :ಗಣೇಶ ಚತುರ್ಥಿ ಪ್ರಯುಕ್ತ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕೋರಿಕೆಯಂತೆ ಜಿಲ್ಲೆಯಲ್ಲಿ ಸೆ. 19 ಹಾಗು ಉಡುಪಿ ನಗರದಲ್ಲಿ ಸೆ. 21 ಮತ್ತು ಸೆ. 23ರಂದು ಡ್ರೈ ಡೇ ಘೋಷಿಸಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಕರಾವಳಿಯಾದ್ಯಂತ ಗಣೇಶ ಚತುರ್ಥಿ ಸಂಭ್ರಮಕ್ಕೆ ಸರ್ವ ಸಿದ್ಧತೆ ಭರದಿಂದ ನಡೆದಿದ್ದು, ಸೋಮವಾರ ಇಂದು ಗೌರಿ ಹಬ್ಬ ಹಾಗೂ ಮಂಗಳವಾರ ಗಣೇಶ ಹಬ್ಬ ಆಚರಣೆಯಾಗಲಿದೆ.