ಉಡುಪಿ: ಉಡುಪಿ ಜಿಲ್ಲೆಯ ಅಲ್ಲಲ್ಲಿ ರವಿವಾರ ಉತ್ತಮ ಮಳೆಯಾಗಿದೆ.ಇಂದು ಮುಂಜಾನೆ ಕೂಡ ಮಳೆ ಸುರಿದಿದ್ದು ಮೋಡ ಕವಿದ ವಾತಾವರಣವಿದ್ದು ಒಂದೆರಡು ಬಾರಿ ಅಲ್ಲಲ್ಲಿ ಮಳೆಯಾಗಿದೆ
ನಿನ್ನೆ ಉಡುಪಿ ಪರ್ಕಳ, ಮಲ್ಪೆ, ಮಣಿಪಾಲ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ಅಲ್ಲಲ್ಲಿ ಕೆಲಕಾಲ ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಇಂದು(ಸೋಮವಾರ) ಹವಾಮಾನ ಇಲಾಖೆ ಕರಾವಳಿಗೆ ಎಲ್ಲೊ ಅಲರ್ಟ್ ಘೊಷಿಸಿದ್ದು ಕರಾವಳಿಯ ಬಹುತೇಕ ಕಡೆ ಹಗುರದಿಂದ ಸಾಧಾರಣ/ಗುಡುಗು ಸಹಿತ ಮಳೆ ಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸೂಚನೆ :ಗಂಟೆಗೆ 40-55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.