ಉಡುಪಿ : ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ರಿ.) ಇದರ “ಚೇತನಾ ಮೊಬೈಲ್ ಅಪ್ಲಿಕೇಷನ್, ಪೇ-ಡೈರೆಕ್ಟ್ ಎ.ಟಿ.ಎಂ ಕಾರ್ಡ್, ಪಿಗ್ಮಿ ಕಲೆಕ್ಷನ್ ಮೊಬೈಲ್ ಅಪ್ಲಿಕೇಷನ್” ಅನಾವರಣ ಕಾರ್ಯಕ್ರಮ ನಡೆಯಿತು.
ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ಶುಭ ಹಾರೈಸಿದರು.
ಬಳಿಕ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ರಿ.) ವತಿಯಿಂದ ಅಭಿನಂದಿಸಲಾಯಿತು.