ಮುಧೋಳ: ಸೆಪ್ಟೆಂಬರ್ 18: ದೃಶ್ಯ ನ್ಯೂಸ್ : ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವು ದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಚೈತ್ರಾ ಕುಂದಾಪುರ ಹೆಸರಿನಲ್ಲಿರುವ ಕಿಯಾ ಕಾರನ್ನು (ಕೆಎ 20 ಎಂಇ 7253) ಮುಧೋಳದಲ್ಲಿ ಭಾನುವಾರ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಗರದ ಡ್ರೈವಿಂಗ್ ಸ್ಕೂಲ್ ನಡೆಸುತ್ತಿರುವ ಹಿಂದೂಪರ ಕಾರ್ಯಕರ್ತ ಕಿರಣ ಗಣಪ್ಪಗೋಳ, ನಗರದಲ್ಲಿ ಚೈತ್ರಾ ಕುಂದಾಪುರ ಅವರ ಕಾರ್ಯಕ್ರಮನ್ನು ಆಯೋಜಿಸಿದ್ದರಿಂದ ಪರಸ್ಪರ ಪರಿಚಯವಿತ್ತು.
ಚೈತ್ರಾ ಜೊತೆ ಇರುವ ಶ್ರೀಕಾಂತ ಎನ್ನುವವರು ಸೆ.9 ರಂದು ಕರೆಮಾಡಿ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಕಾರು ನಿಲ್ಲಿಸಿ ಹೋಗುತ್ತಿದ್ದೇವೆ. ಇದನ್ನು ಮುಧೋಳಕ್ಕೆ ತೆಗೆದುಕೊಂಡು ಹೋಗಬೇಕು ಎಂದು ತಿಳಿಸಿದ್ದರು. ಅದನ್ನು ಮುಧೋಳಕ್ಕೆ ತಂದಿದ್ದೇನೆ ಎಂದು ಕಿರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಿರಣ ಹಿಂದೂ ಸಂಘಟನೆಯಾದ ತಿಲಕ ಫೌಂಡೇಷನ್ ಕಾರ್ಯಕರ್ತರಾಗಿದ್ದಾರೆ. ಸಿಸಿಬಿ ಪೊಲೀಸರು ಕಿರಣ ಅವರ ವಿಚಾರಣೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.