ಉಡುಪಿ : ಸೆಪ್ಟೆಂಬರ್ 17: ದೃಶ್ಯ ನ್ಯೂಸ್ : ಕಲ್ಯಾಣಪುರ ಸಂತೆಕಟ್ಟೆ ಇದರ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಲ್ಯಾಣಪುರ ಸಂತೆಕಟ್ಟೆಯ ಬೃಂದಾವನ ಹೋಟೆಲ್ ಹಾಗೂ ಗೋಪಾಲಕೃಷ್ಣ ಮಠದ ವಠಾರದಲ್ಲಿ ಸೆಪ್ಟೆಂಬರ್ 19 ರಿಂದ 22 ರವರೆಗೆ ನಡೆಯಲಿದೆ.
ಸೆಪ್ಟೆಂಬರ್ 19 ರಂದು ವಿಗ್ರಹ ಪ್ರತಿಷ್ಠಾಪನೆ ಮತ್ತು ಪೂಜಾ ಕಾರ್ಯಕ್ರಮಗಳು ಮುಖ್ಯ ಅರ್ಚಕರಾದ ಶ್ರೀವತ್ಸ ಪರಾಡ್ಕರ್ ಮತ್ತು ಅರ್ಚಕರಾದ ಶಶಿಧರ ಗುರ್ಜಾರ್ ಹರಿಬೆಟ್ಟು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಯೋಜಕರು ತಿಳಿಸಿದ್ದಾರೆ.