ಉಡುಪಿ ಸೆಪ್ಟೆಂಬರ್ 17 ದೃಶ್ಯ ನ್ಯೂಸ್ : ಪ್ರಧಾನಿ ಶ್ರೀ ನರೇಂದ್ರ ಮೋದಿ ಯವರ ಹುಟ್ಟುಹಬ್ಬದ ಅಂಗವಾಗಿ ಉಡುಪಿ ನಗರದ ವಿವಿಧ ರುದ್ರಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇವಕರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಭಾರತವನ್ನು ವಿಶ್ವಗುರುವಾಗಿಸುವ ಪಣತೊಟ್ಟು ಹಗಲಿರುಳು ಶ್ರಮಿಸುತ್ತಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಕ್ತಿ ತುಂಬುವ ನರೇಂದ್ರ ಮೋದಿಯವರ ಕಾರ್ಯವೈಖರಿ ಸರ್ವರಿಗೂ ಆದರ್ಶವಾಗಿದ್ದು, ಮೋದೀಜಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ರುದ್ರಭೂಮಿಯಲ್ಲಿ ಸ್ವಾರ್ಥ ರಹಿತವಾಗಿ ಸೇವೆ ಸಲ್ಲಿಸುತ್ತಿರುವ ಬೆರಳೆಣಿಕೆಯ ಸೇವಕರಿಗೆ ಗೌರವಿಸಲಾಗಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಶ್ರೀ ವಿಶು ಶೆಟ್ಟಿ ಅಂಬಲಪಾಡಿ, ಶ್ರೀ ನಿತ್ಯಾನಂದ ಒಳಕಾಡು ಹಾಗೂ ನಗರ ಸಭೆ ಮಾಜಿ ಆಧ್ಯಕ್ಷರಾದ ಶ್ರೀ ಕಿರಣ್ ಕುಮಾರ್, ನಗರ ಸಭೆ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.