ಉಡುಪಿ : ಬಡಗುಬೆಟ್ಟು ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಯನ್ಸ್ ಜಿಲ್ಲೆ 317 ಸಿ & ಲಿಯೋ ಕ್ಲಬ್ 317ಸಿ ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಉಡುಪಿ ಇಂದ್ರಾಳಿ ಆಶಾ ನಿಲಯ ವಿಶೇಷ ಶಾಲೆ ಉಡುಪಿ ಜಿಲ್ಲಾ ವಿಶೇಷ ಶಿಕ್ಷಕ ಶಿಕ್ಷಕೇತರ ಸಂಘ ಇದರ ಸಹಯೋಗದಲ್ಲಿ ಉಡುಪಿ ಆಶಾ ನಿಲಯದಲ್ಲಿ ವಿಶೇಷ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಡಾ.ಕೆ ವಿದ್ಯಾ ಕುಮಾರಿ ಇವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಸಂಘದ ಅಧ್ಯಕ್ಷರು ಲಯನ್ ಬಿ ಜಯಕರ್ ಶೆಟ್ಟಿ ಇಂದ್ರಾಳಿ, ಗೌರವಾನ್ವಿತ ಅತಿಥಿಗಳಾಗಿ ಲಯನ್ ಮೇರಿ ಕರ್ನೆಲಿಯೋ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕರು ಶ್ರೀ ರಾಜೇಶ್ ವಿ ಶೇರಿಗಾರ್, ಕರ್ನಾಟಕ ಸದನ ಡಯಾಸಿಸ್ ನ ಉಪಾಧ್ಯಕ್ಷರು ರೆವೆರೆಂಡ್ ವಿಕ್ಟರ್ ಖಜಾಂಚಿ ಶ್ರೀ ವಿನ್ಸೆಂಟ್ ಪಾಲನ್ನ, ಉಡುಪಿ ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷರು ರೆವೆರೆಂಡ್ ಡಿ ಐವನ್ ಸೋನ್ಸ್, ಸಭಾಪಾಲಕರು ರೆವೆರೆಂಡ್ ಕಿಶೋರ್,ಲಿಯೋ ಚೇರ್ ಮ್ಯಾನ್ ಲಿಯೋ ಆದಿತ್ಯ ಶೇಟ್, ಆಶಾ ನಿಲಯ ಶಾಲೆಯ ಕಾರ್ಯದರ್ಶಿ ಸ್ಟೀಫನ್ ವಿ ಕರ್ಕೇಡ, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷರು ಶ್ರೀಮತಿ ಆಗ್ನೆಸ್ ಕುಂದರ್ ರಾಜ್ಯಾಧ್ಯಕ್ಷರು ಡಾ.ಕಾಂತಿ ಹರೀಶ್, ಜಿಲ್ಲಾಧ್ಯಕ್ಷರು ಶ್ರೀ ರವೀಂದ್ರ ಎಚ್, ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಕೋಟ್ಯಾನ್ ಪಾಲಕರ ಸಂಘದ ಅಧ್ಯಕ್ಷರು ಶ್ರೀ ಜಯ ವಿಠ್ಠಲ್ ಹಾಗೂ ಲಿಯೋ ಕ್ಲಬ್ ನ ಕಾರ್ಡಿನೇಟರ್ ಸಾಧನ ಕಿಣಿ ಹಾಗೂ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಸುಮಾರು 14 ವಿಶೇಷ ಶಾಲೆಯ 14 ಮಂದಿ ವಿಶೇಷ ಶಿಕ್ಷಕರನ್ನು ಈ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗೌರವಿಸಲಾಯಿತು.
ವಿಶೇಷ ಶಾಲೆಯ ಕೆಲಸದಲ್ಲಿ ಸೇವಾ ನಿರತರಾಗಿರುವ 10 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಶಿಕ್ಷಕೇತರರನ್ನು ಕೂಡ ಗೌರವಿಸಿ ಅಭಿನಂದಿಸಲಾಯಿತು.
ಶಿಕ್ಷಕರ ದಿನಾಚರಣೆ ಅಂಗವಾಗಿ ಉಡುಪಿ ಜಿಲ್ಲೆಯ ಸುಮಾರು 15 ವಿಶೇಷ ಶಾಲೆಗಳು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಮಂದಿ ಪ್ರಶಸ್ತಿಯನ್ನು ಗಳಿಸಿದರು.ಶ್ರೀಮತಿ ಶೈಲ ಅಮನ್ನ ಕಾರ್ಯಕ್ರಮ ನಿರೂಪಿಸಿ ಶ್ರೀಮತಿ ಶಶಿಕಲಾ ಕೋಟ್ಯಾನ್ ಸ್ವಾಗತಿಸಿ ಜಿಲ್ಲಾಧ್ಯಕ್ಷರು ಶ್ರೀ ರವೀಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿ ಕೋಶಾಧಿಕಾರಿ ಸಿಸ್ಟರ್ ಅನ್ಸಿಲ್ಲ ವಂದಿಸಿದರು.