ಮಂಗಳೂರು: ಸೆಪ್ಟೆಂಬರ್ 16: ದೃಶ್ಯ ನ್ಯೂಸ್ : ಚೈತ್ರಾ ಕುಂದಾಪುರ ಬೈಂದೂರು ಟಿಕೆಟ್ ಗಾಗಿ ಕೋಟಿ ಕೋಟಿ ಡೀಲ್ ಪ್ರಕರಣಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಬಿಜೆಪಿಯಲ್ಲಿ ಹಣವೇ ಪ್ರಧಾನವಲ್ಲ. ಹಾಗೊಂದು ವೇಳೆ ಹಣವೇ ಪ್ರಧಾನವಾಗಿದ್ದರೆ ಬೈಂದೂರಿನಲ್ಲಿ ಟಿಕೆಟ್ ಬಡ ಕಾರ್ಯಕರ್ತ ಗುರುರಾಜ್ ಗಂಟಿ ಹೊಳೆಯವರಿಗೆ ಸಿಗುತ್ತಿರಲಿಲ್ಲ. ಸುಳ್ಯದಲ್ಲಿ ಬಡ ಮಹಿಳೆ ಭಾಗೀರಥಿ ಮುರುಳ್ಯ ರವರಿಗೂ ಟಿಕೆಟ್ ಸಿಗುತ್ತಿರಲಿಲ್ಲ ಎಂದರು.
ಕೋಟ ಶ್ರೀನಿವಾಸ ಪೂಜಾರಿ, ಸುನೀಲ್ ಕುಮಾರ್, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹರು ಮಂತ್ರಿಗಳು ಆಗುತ್ತಿರಲಿಲ್ಲ ಎಂದರು.
ಗೋವಿಂದ ಬಾಬು ಪೂಜಾರಿಯವರನ್ನು ಇಲ್ಲಿ ಮೋಸ ಮಾಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿಯಂಥ ಬುದ್ಧಿವಂತರ ಜಿಲ್ಲೆಯ ಗೋವಿಂದ ಬಾಬು ಪೂಜಾರಿಯವರೇ ಮೋಸ ಹೋಗಿರುವುದು ಆಶ್ಚರ್ಯಕರ ಎಂದರು.
ಗೋವಿಂದ ಬಾಬು ಪೂಜಾರಿಯವರು ಬಿಜೆಪಿಯ ಯಾರಿಗೂ ನೇರವಾಗಿ ಕರೆ ಮಾಡಿದರೂ ಬಿಜೆಪಿನಾಯಕರು ಫೋನ್ ಗೆ ಸಿಗುತ್ತಿದ್ದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯೇ ಅವರೊಂದಿಗೆ ತುಳು ಭಾಷೆ ಯಲ್ಲಿಯೇ ಮಾತನಾಡಿಸುತ್ತಿದ್ದರು ಎಂದರು.
ನಳಿನ್ ಕುಮಾರ್ ಕಟೀಲ್, ಕೋಟ ಶ್ರೀನಿವಾಸ ಪೂಜಾರಿಯವರಲ್ಲಿ ನೇರ ಫೋನ್ ಮಾಡಿ ಮಾತನಾಡುವ ಅವಕಾಶ ಅವರಿಗೆ ಇತ್ತು ಎಂದರು.
ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಿ ಸತ್ಯ ಬಹಿರಂಗ ವಾಗಲಿ ಪ್ರಕರಣದ ಹಿಂದೆ ಯಾರೇ ಇದ್ದರೂ ಅದರ ಬಗ್ಗೆ ಸೂಕ್ತ ತನಿಖೆ ನಡೆದು ಕಾನೂನು ಕ್ರಮವಾಗಲಿ. ಪ್ರಕರಣದಲ್ಲಿ ಯಾರ್ಯಾರದ್ದೋ ಹೆಸರು ಕೇಳಿ ಬರುತ್ತಿದೆ ಅನ್ನುವುದು ಬೇರೆ ವಿಷಯ ಕೋಟಿ ಕೋಟಿ ವಂಚನೆ ಪ್ರಕರಣ ಮೋಸ ಹೋದವರಿಗೂ ಒಂದು ರೀತಿಯ ಪಾಠವೇ ಆಗಲಿ ಎಂದರು.