ಉಡುಪಿ : ಸೆಪ್ಟೆಂಬರ್ 16: ದೃಶ್ಯ ನ್ಯೂಸ್ : ನಗರದ ಕಡಿಯಾಳಿಯ ಗಣೇಶ ವಿಗ್ರಹಗಳ ಹಾಗೂ ಮೂರ್ತಿ ತಯಾರಿಕ ಘಟಕ ಹಾಗೂ ಮಾರಾಟ ಸಂಸ್ಥೆಗೆ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ. ಕೆ ಅವರು ಭೇಟಿ ನೀಡಿ ಪರಿವೀಕ್ಷಣೆ ನಡೆಸಿದರು.
ಇದೇ ಸಂದರ್ಭದಲ್ಲಿ ಗಣಪತಿ ವಿಗ್ರಹ ತಯಾರಿಕರೊಂದಿಗೆ, ವಿಗ್ರಹ ತಯಾರಿಕೆಗೆ ಬಳಸುತ್ತಿರುವ ವಸ್ತುಗಳು ಹಾಗೂ ಬಣ್ಣದ ಲೇಪನದ ಬಗ್ಗೆ ಮಾಹಿತಿ ಪಡೆದರು.
ಪ್ಲಾಸ್ಟರ್ ಆಪ್ ಪೇರಿಸ್ ಬಳಸದಂತೆ ಸೂಚನೆ ನೀಡಿದ ಅವರು ಬಣ್ಣವಿಲ್ಲದ ವಿಗ್ರಹಗಳ ತಯಾರಿಕೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.