ಬೆಂಗಳೂರು : ಸೆಪ್ಟೆಂಬರ್ 16: ದೃಶ್ಯ ನ್ಯೂಸ್ : ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣಕ್ಕೆ ಮಾಜಿ ಸಚಿವ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಬಳಿ ಹಣ ಪಡೆದು ಚೈತ್ರಾ ಕುಂದಾಪುರ ಗ್ಯಾಂಗ್ ವಂಚನೆ ಪ್ರಕರಣದಲ್ಲಿ ಇಲ್ಲಿ ಸಂದರ್ಭ ದುರ್ಬಳಕೆ ಆಗಿದೆ. ಬಿಜೆಪಿಯಲ್ಲಿ ಟಿಕೆಟ್ ಮಾರಾಟಕ್ಕಿಲ್ಲ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಹೇಳಿದರು.
ಮೋಸ ಹೋಗುವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ, ಹಣ ಮೂಲಕ ಟಿಕೆಟ್ ಪಡೆಯುವ ಪ್ರಯತ್ನ ಯಾರೂ ಮಾಡಬಾರದು.
ಒಂದು ವೇಳೆ ಹಣದ ಮೂಲಕ ಟಿಕೆಟ್ ಪಡೆಯಲು ಯತ್ನಿಸಿದರೆ ಮತ್ತೊಬ್ಬ ಗೋವಿಂದಬಾಬು ಪೂಜಾರಿ ಆಗುತ್ತೀರಿ ಎಂದು ಸಿ.ಟಿ ರವಿ ತಿಳಿಸಿದರು.