ಉಡುಪಿ : ಸೆಪ್ಟೆಂಬರ್ 16 ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಯ ಕಾಪು ಸಮೀಪ ಮಣಿಪುರ ಚರ್ಚ್ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟೆಂಪೋವನ್ನು ವಶಕ್ಕೆ ಪಡೆದ ಪೊಲೀಸರು ಮೂವರನ್ನು ಬಂಧಿಸಿರುವ ಘಟನೆ ಸಂಭವಿಸಿದೆ.
ಕಾಪು ಎಸ್ ಐ ಅಬ್ದುಲ್ ಖಾದರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಟೆಂಪೋ ಚಾಲಕ ನಝೀರ್, ಮಿಥುನ್ ಮತ್ತು ಜೀವನ್ ಪೋಲೀಸರ ಅತಿಥಿಯಾಗಿದ್ದಾರೆ.
ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ 407 ಟೆಂಪೋ ಸಹಿತ ಫುಲ್ ಲೋಡ್ ಮರಳನ್ನು ಸ್ವಾಧೀನಪಡಿಸಿ ಕೊಂಡಿರುವ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.