ಉಡುಪಿ: ಸೆಪ್ಟೆಂಬರ್: 15 ದೃಶ್ಯ ನ್ಯೂಸ್ : ಉಡುಪಿ ಜಿಲ್ಲೆಗೆ ಕಾರ್ಮಿಕ ವಿಮಾ ಯೋಜನೆ ಯಡಿ 100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಈಗಾಗಲೇ ಘೋಷಣೆಯಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಅಧ್ಯಕ್ಷ ಜಿ. ಎ. ಕೋಟೆಯಾರ್
100 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಘೋಷಣೆಯಾಗಿ ಎರಡು ವರ್ಷ ಕಳೆದರೂ ಕೂಡ ಆಸ್ಪತ್ರೆಗೆ ಸಂಬಂದಿಸಿದ ಯಾವುದೇ ಕೆಲಸ ಇನ್ನೂ ಕೂಡ ಆರಂಭಗೊಂಡಿಲ್ಲ.
ಇದನ್ನು ನಮ್ಮ ಪೌಂಡೇಶನ್ ಖಂಡಿಸುತ್ತೇವೆ. ಇದನ್ನು ಖಂಡಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಉಪವಾಸ ಸತ್ಯಾಗ್ರಹವು ಸೆ. 16ರಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಲಿದೆ ಎಂದು ತಿಳಿಸಿದರು.