ಉಡುಪಿ : ಸೆ. 15. ದೃಶ್ಯ ನ್ಯೂಸ್ : ಕರವೇ ರಾಜ್ಯಾಧ್ಯಕ್ಷರಾದ ಟಿ. ಎ ನಾರಾಯಣ ಗೌಡರ ಆದೇಶದಂತೆ, ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿಯವರ ಸಾರಥ್ಯದಲ್ಲಿ, ಉಡುಪಿ ಜಿಲ್ಲಾ ಹಾಗೂ ಎಲ್ಲಾ ತಾಲೂಕು ಘಟಕದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರದೊಂದಿಗೆ “ಕನ್ನಡಿಗರ ಜೀವನದಿ ಕಾವೇರಿಯ ನೀರು ತಮಿಳುನಾಡಿಗೆ ಬಿಡದಂತೆ, ಸರಕಾರದ ಮೇಲೆ ಒತ್ತಡ ಹೇರಲು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಹಾಗೂ ಸಾಂಕೇತಿಕ ಪ್ರತಿಭಟನೆ ದಿನಾಂಕ: 15.09.2023 ರ ಶುಕ್ರವಾರ ಬೆಳಿಗ್ಗೆ 10:30 ಕ್ಕೆ
ಜಿಲ್ಲಾಧಿಕಾರಿಗಳ ಕಛೇರಿ ರಜತಾದ್ರಿ ಮಣಿಪಾಲದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಕ್ಷಣ ವೇದಿಕೆ ಉಡುಪಿ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.