ಕರ್ನಾಟಕ ಪ್ರಾಂತೀಯ ಕಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಅಧ್ಯಕ್ಷರಾದ ಡಾ.ಪೀಟರ್ ಮಚಾದೊ ಅವರ ನೇತೃತ್ವದ ಧರ್ಮಾಧ್ಯಕ್ಷರ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿ ಹಲವು ಶೈಕ್ಷಣಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ಮುಂದಿಟ್ಟಿತು.
ನಿಯೋಗದಲ್ಲಿ ಧರ್ಮಾಧ್ಯಕ್ಷರುಗಳಾದ ಡಾ.ಚಿರಾಲ್ಡ್ ಐಸಾಕ್ ಲೋಬೋ, ಡಾ.ಗೀವರ್ಗೀಸ್ ಮಕಾರಿಯೋಸ್, ಡಾ.ಪೀಟರ್ ಪೌಲ್ ಸಲ್ಡಾನಾ, ಡಾ.ಡೆರಿಕ್ ಫೆರ್ನಾಂಡೀಸ್, ಡಾ.ರಾಬರ್ಟ್ ಮಿರಾಂಡ, ಡಾ.ಫ್ರಾನ್ಸಿಸ್ ಸೆರಾವೋ, ಡಾ.ಜೋಸೆಫ್ ಅರುಮಚಡತ್, ಡಾ.ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರುಗಳಿದ್ದರು.