ಬೈಂದೂರು:ಪದವಿಪೂರ್ವ ಶಿಕ್ಷಣ ಇಲಾಖೆಯ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ ನಡೆಯಿತು
ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನರಸಿಂಹ ದೇವಾಡಿಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬಲ್ಲ ಆತ್ಮವಿಶ್ವಾಸ ಕ್ರೀಡೆ ನೀಡಲಿದೆ ಎಂದರು.
ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷರಾದ ಪ್ರವೀಣ್ ಪೂಜಾರಿ ಅವರು ಅಂಕಣವನ್ನು ಉದ್ಘಾಟಿಸುವ ಮೂಲಕ ವಾಲಿಬಾಲ್ ಗೆ ಚಾಲನೆ ನೀಡಿದರು ನಂತರ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ವಿತರಿಸಿದರು.
ಸಂಸ್ಥೆಯ ದೈಹಿಕ ಶಿಕ್ಷಕರಾದ ಜೀವನ್ ಕುಮಾರ್ ಶೆಟ್ಟಿ ಮಾತನಾಡಿ ಒಟ್ಟು ಪುರುಷರ ನಾಲ್ಕು ತಂಡ ಹಾಗೂ ಮಹಿಳೆಯರ ಮೂರು ತಂಡಗಳು ಭಾಗವಹಿಸಿ ಇದರಲ್ಲಿ ವಿಜೇತವಾದ ತಂಡ ಇದೇ ತಿಂಗಳು 23ಕ್ಕೆ ನಡೆಯುವ ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಜಿಲ್ಲಾ ಮಟ್ಟದ ಪಂದ್ಯಾಟ ಆಯ್ಕೆಯಾಗುತ್ತಾರೆ ಎಂದರು
ಸಂಸ್ಥೆಯ ಪ್ರಾಂಶುಪಾಲರಾದ ಅರುಣ್ ಗಂಗಾಧರ್ ನಾಯ್ಕ್ ಮಾತನಾಡಿ ಸೋಲು ಗೆಲುವು ಸಮನವಾಗಿ ಹಂಚಿಕೊಳ್ಳಬೇಕು ಸಹಕರಿಸಿದ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಸತೀಶ್ ಚಂದನ್ ಉಪಾಧ್ಯಕ್ಷರು ಎಸ್. ಡಿ. ಎಂ. ಸಿ. ನಾವುಂದ,ರಾಮ ಪೂಜಾರಿ ಸದಸ್ಯರು ಗ್ರಾಮ ಪಂಚಾಯತ್ ನಾವುಂದ,ಶ್ರೀಮತಿ ಶಶಿಕಲಾ ನಾಯಕ್ ಉಪಾಪ್ರಾಂಶುಪಾಲರು ಸುಕೇಶ್ ಶೆಟ್ಟಿ ದೈಹಿಕ ಶಿಕ್ಷಕರು ಕೊಲ್ಲೂರು, ಗಣೇಶ್ ಸರ್ ,ರತನ್ ಬಿಜೂರು ,ಮಹಮ್ಮದ್ ಇಲಿಯಾಸ್ ಕಾಲೇಜು ಅಭಿವೃದ್ಧಿ ಸದಸ್ಯರಾದ ರಾಮ ನಾಗರಾಜ್ ಲೋಕೇಶ್ ಉಮೇಶ್ ಹರೀಶ್ ಆಚಾರ್ಯ ,ಸಂಸ್ಥೆಯ ಉಪನ್ಯಾಸಕರು ಉಪಸ್ಥಿತರಿದ್ದರು.