ಕಾರ್ಕಳ : ಬಜೆಟ್ ನಲ್ಲಿ ಘೋಷಿಸಿದಂತೆ ರಾಜ್ಯ ಸರಕಾರ *ಫುಡ್ ಡೆಲಿವರಿ ಮಾಡುವವರು ಇ_ ಕಾಮರ್ಸ್ ಸಂಸ್ಥೆಗಳಲ್ಲಿ ದುಡಿಯುವ ಕಾರ್ಮಿಕರಿಗೆ 2 ಲಕ್ಷ* *ರೂಪಾಯಿ ಜೀವವಿಮೆ* *ಹಾಗೂ 2 ಲಕ್ಷ ರೂಪಾಯಿ ಅಪಘಾತ ಪರಿಹಾರ ವಿಮೆ* *ಸೌಲಭ್ಯ ಕಲ್ಪಿಸಲು ಆದೇಶ ಹೊರಡಿಸಿರುವುದು ಸ್ವಾಗತಾರ್ಹ.ಕಾರ್ಮಿಕರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಮನೆ ಬಾಗಿಲಿಗೆ ಹಾಲು ಹಾಕುವವರು ಹಾಗೂ ದಿನಪತ್ರಿಕೆ ವಿತರಿಸುವವರನ್ನು ಕೂಡ ಸರಕಾರ ಗುರುತಿಸಬೇಕಾಗಿದೆ.
ಪತ್ರಿಕಾ ವಿತರಕರು ಮತ್ತು ದಿನಂಪ್ರತಿ ಹಾಲು ಹಾಕುವವರ ಕೆಲಸ ಕೂಡ ಫುಡ್ ಡೆಲಿವರಿ ನೌಕರರಂತೆ ಹೆಚ್ಚಿನ ಸವಾಲನ್ನು ಹೊಂದಿದೆ.ಗಡಿಯಾರದ ವಿರುದ್ಧ ಇವರ ವೃತ್ತಿಯ ಚಲನೆ ಇರುತ್ತದೆ.ಮಳೆಯಿರಲಿ _ಚಳಿ ಇರಲಿ ಇವರ ಕೆಲಸಗಳು ಸೂರ್ಯೋದಯಕ್ಕೂ ಪೂರ್ವದಲ್ಲಿಯೇ ಆರಂಭಗೊಳ್ಳುತ್ತವೆ.
ಪತ್ರಿಕೆಯನ್ನು ಹಾಗೂ ಹಾಲನ್ನು ಬೆಳಿಗ್ಗೆ 6 ರಿಂದ 7 ಗಂಟೆಯ ಒಳಗೆ ಮನೆ ಬಾಗಿಲಿಗೆ ಸೂಕ್ತ ಸಮಯದಲ್ಲಿ ತಲುಪಿಸುವ ಹೊಣೆಗಾರಿಕೆ ಸಣ್ಣದೇನಲ್ಲ.
ಕೌಟುಂಬಿಕ ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತದೆ ಇವರು ಸೈನಿಕರಂತೆ ನಿತ್ಯವೂ ಸೇವೆ ಸಲ್ಲಿಸುತ್ತಿದ್ದಾರೆ.ಸರಕಾರ ಇವರ ಶ್ರಮವನ್ನು ಗುರುತಿಸುವುದು ಕೂಡ ಅತಿ ಮುಖ್ಯ ಕರೋನ ಕಾಲಘಟ್ಟದಲ್ಲಿ ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದ ಸಮಯದಲ್ಲಿ ಒಂದು ದಿನವೂ ವಿರಮಿಸದೆ ದಿನಪತ್ರಿಕೆಯನ್ನು ಮನೆ_ಮನೆಗಳಿಗೆ ತಲುಪಿಸುತ್ತಿದ್ದ ಪತ್ರಿಕಾ ವಿತರಕರು ಹಾಗೂ ಹಾಲು ಪೂರೈಕೆ ಮಾಡುವವರನ್ನು ಸಹ ಸರಕಾರ ಕೋವಿಡ್ ವಾರಿಯರ್” ಎಂದು ಗುರುತಿಸಿತ್ತು.
ಜೀವದ ಹಂಗು ತೊರೆದು ಇವರು ಸಲ್ಲಿಸಿದ ಸೇವೆಗೆ ಜನಸಮುದಾಯದಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು .
ಆದರೆ ಈ ಅಸಂಘಟಿತ ಕಾರ್ಮಿಕರಿಗೆ *ಪತ್ರಿಕಾ ಸಂಸ್ಥೆಗಳು ನೀಡುವ ಸಂಭಾವನೆ ಹೊರತಾಗಿ* *ಹಾಗೂ ಹಾಲು ಹಾಕುವವರಿಗೆ ಅವರ* *ಯಜಮಾನರು ನೀಡುವ ಸಂಬಳದ ಹೊರತಾಗಿ ಬೇರೆ ಯಾವುದೇ* *ಸೌಲಭ್ಯಗಳು ಇಲ್ಲ .*
ನಸುಕಿನ ವಾತಾವರಣದಲ್ಲಿ, ಧಾವಂತದಲ್ಲಿ ಕೆಲಸ ಮಾಡುವಾಗ *ಆರೋಗ್ಯ ಹದಗೆಟ್ಟರೆ,, ಆಕಸ್ಮಿಕ ಅಪಘಾತ ಸಂಭವಿಸಿದರೆ* *ಆರೋಗ್ಯ ಭದ್ರತೆ* *ಪಡೆಯಲು ಸೂಕ್ತ* *ವ್ಯವಸ್ಥೆಗಳು ಇಲ್ಲ.*
ಹಾಲು ಹಾಕುವವರನ್ನು ಹಾಗೂ ಪತ್ರಿಕಾ ವಿತರಕರನ್ನು ಪರಿಗಣಿಸಿ *ವಿಮಾ ಸೌಲಭ್ಯ ವಿಸ್ತರಿಸಬೇಕಾಗಿದೆ.*
ಪತ್ರಿಕಾ ವಿತರಕರಿಗೆ *ಸಾಮಾಜಿಕ* *ಭದ್ರತಾ* *ಗ್ಯಾರಂಟಿಯನ್ನು ಒದಗಿಸಲು* ರಾಜ್ಯದ ಎಲ್ಲಾ ಶಾಸಕರು ಪಕ್ಷ ಭೇದ ಮರೆತು ರಾಜ್ಯ ಸರಕಾರಕ್ಕೆ ಒತ್ತಾಯಿಸಬೇಕೆಂದು *ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯ* *ಸಂಚಾಲಕರಾದ ಶ್ರೀ* *ಸಾಣೂರು ನರಸಿಂಹ ಕಾಮತ್* ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿರುತ್ತಾರೆ.