ಉಡುಪಿ : ಕಟಪಾಡಿ ಲಯನ್ಸ್ ಕ್ಲಬ್, ಜಿಲ್ಲಾ ಸಂಚಾರಿ ನೇತ್ರಾಲಯ ಜಿಲ್ಲಾ ಅಂಧತ್ವ ನಿವಾರಣೆ ವಿಭಾಗ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕಟಪಾಡಿ, ಇವರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ಚರ್ಮ ಮದುಮೇಹ, ರಕ್ತದೊತ್ತಡ ಚಿಕಿತ್ಸಾ ಶಿಬಿರವು ಕಟಪಾಡಿ ಎಸ್ ವಿ ಎಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ 317 ಮಾಜಿ ಜಿಲ್ಲಾ ಗವರ್ನರ್ ಎಂ ಜೆ ಎಫ್ ಲಯನ್ ಡಾಕ್ಟರ್ ರವೀಂದ್ರನಾಥ್ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಎಸ್‌ವಿಎಸ್ ವಿದ್ಯಾವರ್ಧಕ ಸಂಘದ ಸಂಚಾಲಕ ಶ್ರೀ ಸತ್ಯೇಂದ್ರ ಪೈ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನೇತ್ರ ತಜ್ಞ ಡಾ. ನಿತ್ಯಾನಂದ ನಾಯಕ್ ರವರು ಕಣ್ಣಿನ ಪ್ರಾಮುಖ್ಯತೆ ಮಧುಮೇಹದಿಂದ ಬರುವ ಕಣ್ಣಿನ ತೊಂದರೆಗಳು ಕಣ್ಣಿನ ನರದ ದೌರ್ಬಲ್ಯಗಳ ಬಗ್ಗೆ ಮಾಹಿತಿ ನೀಡಿದರು.
ಸಂಚಾಲಕ ಸತ್ಯೇಂದ್ರ ಪೈ ಮಾತನಾಡುತ್ತಾ ಇಂತಹ ಒಳ್ಳೆಯ ಕಾರ್ಯಕ್ರಮಕ್ಕಾಗಿ ನಮ್ಮ ಸಂಸ್ಥೆ ನಿಮಗೆ ಸದಾ ಬಾಗಿಲು ತೆರೆದಿದೆ ಎಂದರು.
ಉದ್ಘಾಟನಾ ಭಾಷಣದಲ್ಲಿ ಲಯನ್ ಡಾ. ರವೀಂದ್ರ ಶೆಟ್ಟಿ ಅವರು, ಆರೋಗ್ಯ ತಪಾಸಣೆಯ ಮಹತ್ವ ತಿಳಿಸಿದರು.
ಕಟಪಾಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಕೆ ಜಗದೀಶ್ ಕಾಮತ್ ರವರು ಅಧ್ಯಕ್ಷತೆ ವಹಿಸಿದ್ದರು.ಕಟಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಭಾ ಶೆಟ್ಟಿ ಹಾಗೂ, ಕಾರ್ಕಳ ಪ್ರಾಥಮಿಕ ಆರೋಗ್ಯ್ ಕೇಂದ್ರದ ಚರ್ಮರೋಗ ತಜ್ಞ ಡಾಕ್ಟರ್ ಯಶೋಧರ್ ಎಂ, ಕಟಪಾಡಿ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ಶೈನಿಕ್ರಿಸ್ತಬೆಲ್ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಹಾಗೂ ಮುಂಜಾಗ್ರತಾ ಕ್ರಮ ಹೇಳಿದರು.
ದಾದಿಯರು ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು ನಿಕಟಪೂರ್ವ ಅಧ್ಯಕ್ಷ ಪ್ರಭಾಕರ್ ಪಾಲನ್ ಸ್ವಾಗತಿಸಿ ಕೋಶಾಧಿಕಾರಿ ರೋಷನ್ ಡಿಸಿಲ್ವಾ ವಂದಿಸಿದರು. ಕಟಪಾಡಿ ಲಯನ್ಸ್ ಕ್ಲಬ್ ನ ನಿಕಟಪೂರ್ವ ಕಾರ್ಯದರ್ಶಿ ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸುಮಾರು 150ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು