ಉಡುಪಿ ವಿಶ್ವಕರ್ಮ ಸಮಾಜದ ಐಕ್ಯತೆ ಮತ್ತು ಸಂಘಟನೆ ಪ್ರತೀಕವಾಗಿ ವಿಶ್ವಕರ್ಮ ಧ್ವಜವು ಮೂಡಿಬರಲಿ ಎಂದು ವಿಶ್ವ ಬ್ರಾಹ್ಮಣರ ಕುಲಗುರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಕಾಪುವಿನ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ಆನೆಗುಂದಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ಅವರಿಗೆ ಹಸ್ತಾಂತರಿಸುವುದರ ಮೂಲಕ ಧ್ವಜದ ಬಿಡುಗಡೆ ಮಾಡಿ ಆಶೀರ್ವಚಿಸಿದರು.
ವಿಶ್ವಕರ್ಮ ಧ್ವಜದಲ್ಲಿ ಆರು ಬಣ್ಣಗಳಿವೆ. ಇದರಲ್ಲಿ ಐದು ಬಣ್ಣಗಳು ವಿಶ್ವಕರ್ಮನ ಸಾಕಾರ ರೂಪದ ಐದು ಮುಖಗಳ ಬಣ್ಣವನ್ನು ಹೊಂದಿದೆ. ಐದು ಮುಖಗಳಾದ ಸದ್ಯೋಜಾತ- ಬಿಳಿ, ವಾಮದೇವ- ಕಪ್ಪು, ಅಘೋರ- ಕೆಂಪು, ತತ್ಪುರಷ- ಹಳದಿ, ಈಶಾನ – ಹಸುರು ಹಾಗೂ ಆರನೇ ಬಣ್ಣವು ಶರೀರ – ಹೇಮವರ್ಣ (ಚಿನ್ನದ ಬಣ್ಣ) ವನ್ನು, ಪ್ರಕೃತಿಯ ಪೂರ್ಣ ರೂಪವಾದ ಭೂಮಿಯನ್ನು ಪಂಚಶಕ್ತಿಗಳನ್ನು ಪ್ರತಿನಿಧೀಕರಿಸುತ್ತದೆ. ಭೂಮಿಯ ಮೇಲೆ ಜ್ಞಾನದ ಸಂಕೇತವಾದ ಓಂಕಾರದ ಲಾಂಛನವನ್ನು ಹೊಂದಿದೆ. ಕತ್ತಲೆಯಿಂದ ಬೆಳಕಿನೆಡೆಗೆ ಎನ್ನುವ ಜ್ಞಾನ ಸಂದೇಶವನ್ನೂ ನೀಡುತ್ತದೆ. ಆಯತಾಕಾರದ ಧ್ವಜವು ವಾಸ್ತು ಪ್ರಕಾರ ಧ್ವಜಾಯದಲ್ಲಿದೆ