ಉಡುಪಿ: ಸೆ.12: ದೃಶ್ಯ ನ್ಯೂಸ್ : ನಗರದ ಶ್ರೀಕೃಷ್ಣ ಮಠಕ್ಕೆ ದರ್ಶನಾರ್ಥಿಯಾಗಿ ಬಂದ ಭಕ್ತೆಯೊರ್ವಳು, ಭೋಜನಶಾಲೆಯಲ್ಲಿ ಅನ್ನ ಪ್ರಸಾದ ಸ್ವೀಕರಿಸಿ, ಕೈ ತೊಳೆಯಲು ಕೆಳಗಿಳಿದು ಬರುವಾಗ, ಜಾರಿ ಬಿದ್ದಿರುವ ಘಟನೆ ನಡೆದಿದೆ.
ಯಾತ್ರಾರ್ಥಿ ಮಹಿಳೆಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಕೃಷ್ಣ ಮಠದ ಸಿಬ್ಬಂದಿಗಳ ಸಹಕಾರದಿಂದ ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ತಲೆಯೊಳಗೆ ಗಾಯವಾಗಿರುವ ಲಕ್ಷಣ ಕಂಡುಬಂದಿದೆ.
ರಕ್ಷಿಸಲ್ಪಟ್ಟ ಯಾತ್ರಾರ್ಥಿ ಮಹಿಳೆಯನ್ನು ಸುಮಾ ನಾಗರಾಜ್, ಹಾವೇರಿ ಜಿಲ್ಲೆಯ, ಸವಣೂರು ತಾಲೂಕಿನ, ಚೌಡಾಲ ಗ್ರಾಮದ ನಿವಾಸಿಯೆಂದು ಗುರುತಿಸಲಾಗಿದೆ.
ಸಂಬಂದಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.