ಉಡುಪಿ; ಕಲ್ಸಂಕ ಗುಂಡಿಬೈಲು ಇಲ್ಲಿಯ ಪಾದಚಾರಿ ರಸ್ತೆಯಲ್ಲಿ ಆಯಾತಪ್ಪಿ ಬಿದ್ದು, ಗಾಯಾಳಾಗಿ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುರವರು ಸಾರ್ವಜನಿಕರ ಸಹಕಾರದೊಂದಿಗೆ ರಕ್ಷಿಸಿರುವ ಘಟನೆ ನಡೆದಿದೆ.
ನಗರದ ಪಾದಾಚಾರಿ ರಸ್ತೆಯಲ್ಲಿ ಯುವನೋರ್ವ ಬಿದ್ದು ತಲೆಯ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಪರಿಣಾಮ ರಕ್ತಸ್ರಾವಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನು ಎನ್ನಲಾಗಿದೆ.
ಸಾರ್ವಜನಿಕರು ಕೂಡಲೇ ಸಮಾಜ ಸೇವಕ ನಿತ್ಯಾನಂದ ಒಳಕಾಡುರವರಿಗೆ ಮಾಹಿತಿಯನ್ನು ನೀಡಿದ್ದರು ಎನ್ನಲಾಗಿದೆ.
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಒಳಕಾಡುವವರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದು ಯುವಕನನ್ನು ರಕ್ಷಿಸಿ ಅಜ್ಜರಕಾಡು ಆಸ್ಪತ್ರೆಗೆ ದಾಖಲು ಪಡಿಸಿ ಮಾನವೀಯತೆ ಮೆರೆದಿದ್ದಾರೆ.
ರಕ್ಷಿಸಲ್ಪಟ್ಟ ಯುವಕನನ್ನು ಕಿರಣ್ (22ವ) ಎಂದು ಗುರುತಿಸಲಾಗಿದೆ. ಯುವಕನ ವಿಳಾಸ ತಿಳಿದು ಬಂದಿಲ್ಲ.
ಸಂಬಂಧಿಕರು ಯಾರಾದರೂ ಇದ್ದಲ್ಲಿ ಉಡುಪಿಯ ಜಿಲಾಸ್ಪತ್ರೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ.