ಕಾರ್ಕಳ : ಚುನಾವಣಾ ಪೂರ್ವದಲ್ಲಿ ಶಾಸಕ ಸುನೀಲ್ ಕುಮಾರ್ ಮುತುವರ್ಜಿಯಲ್ಲಿ ನಿರ್ಮಾಣವಾಗಿರುವ ಪರಶುರಾಮನ ಥೀಮ್ ಪಾರ್ಕ್ ಹಲವು ಗೊಂದಲಗಳಿಗೆ ಕಾರಣವಾಗಿವೆ, ಕಂಚಿನದ್ದು ಎಂದು ಸ್ಥಾಪಿಸಲಾದ ಪರಶುರಾಮನ ಪ್ರತಿಮೆಯ ಬಗ್ಗೆ ಹಲವಾರು ಸಂಶಯಗಳಿದ್ದು ಸತ್ಯ ಏನು ಎಂದು ತಿಳಿಯುವ ಪ್ರಯತ್ನವಾಗಬೇಕಿದೆ, ಹಾಗಾಗಿ ಈ ವಿಚಾರವಾಗಿ ಸೆಪ್ಟೆಂಬರ್ 23 ರಂದು ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾವೂ ಭಾಗವಹಿಸುತ್ತೇವೆ ನಮಗೂ ಥೀಮ್ ಪಾರ್ಕಿನ ವಿಚಾರವಾಗಿ ಮಾತನಾಡಲು ಅವಕಾಶ ನೀಡಬೇಕು, ಅಂದೇ ಮೂರ್ತಿಯ ನೈಜ್ಯತೆಯ ಬಗ್ಗೆ ಸತ್ಯಾಸತ್ಯತೆ ಬಹಿರಂಗವಾಗಿ ಗೊಂದಲ ನಿವಾರಣೆಯಾಗಲಿ ಎಂದು ಶುಭದರಾವ್ ಆಗ್ರಹಿಸಿದ್ದಾರೆ
ಕಾಂಗ್ರೇಸ್ ಥೀಮ್ ಪಾರ್ಕ್ ಬಗ್ಗೆ ಯಾವತ್ತೂ ವಿರೋದ ಮಾಡಲಿಲ್ಲ ಮಾಡುವುದೂ ಇಲ್ಲ, ನಮ್ಮ ಆಗ್ರಹ ಕೇವಲ ಪ್ರತಿಮೆ ಯಾವುದರಿಂದ ಮಾಡಲಾಗಿದೆ ಎನ್ನುವ ಬಗ್ಗೆ. ಪ್ರತಿಮೆಯ ಬಗ್ಗೆ ಸಂಶಯ ಬಂದಾಗ ಪ್ರಶ್ನಿಸುವುದು ನಮ್ಮ ಕರ್ತವ್ಯ ಯಾಕೆಂದರೆ ಅಲ್ಲಿ ವಿನಿಯೋಗವಾಗಿದ್ದು ಜನರ ತೆರಿಗೆ ಹಣ, ಪರಶುರಾಮನ ಕಂಚಿನ ಪ್ರತಿಮೆ ಎಂದು ನಂಬಿಸಿ ಬೇರೆಯೆ ವಸ್ತುವಿನಿಂದ ಪ್ರತಿಮೆ ಮಾಡಿದ್ದರ ಪರಿಣಾಮ ಇಷ್ಟೇಲ್ಲ ಗೊಂದಲಕ್ಕೆ ಕಾರಣವಾಗಿದೆ. ಇದು ದೇಶದಲ್ಲೇ ಪ್ರಥಮ ತನ್ನ ಸರಕಾರವಿದ್ದರೂ ಪಾರ್ಕ್ ನಿರ್ಮಾಣಕ್ಕೆ ಜಾಮೀನು ಕಾದಿರಿಸದೆ ಅದರ ವಿರುದ್ಧವೇ ಆದೇಶ ಹೊರಡಿಸಲಾಗಿದೆ, ಅಂದು ಮೌನವಿದ್ದ ಶಾಸಕರು ಇಂದು ಮೈ ಪರಚಿಕೊಳ್ಳುತ್ತಿದ್ದಾರೆ, ತನ್ನ ಮುತುರ್ವಜಿಯಲ್ಲಿ ಪ್ರತಿಷ್ಠಾಪಿಸಿದ ಪ್ರತಿಮೆ ಕಂಚಿನಿಂದಲೇ ಮಾಡಲಾಗಿದೆ ಎಂದು ಹೇಳುವ ದೈರ್ಯ ತೋರದ ಶಾಸಕರು ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದ್ದಾರೆ, ರಾಜಕೀಯ ಪ್ರಚಾರಕ್ಕಾಗಿ ನಕಲಿ ಮೂರ್ತಿ ಸ್ಥಾಪಿಸಿದ ಅವರಿಗೆ ನನ್ನ ದಿಕ್ಕಾರವಿದೆ ಎಂದರು.
ಥೀಮ್ ಪಾರ್ಕ್ ಪರವಾಗಿ ಪ್ರತಿಭಟಿಸುವ ಮತ್ತು ಈ ಬಗ್ಗೆ ಹೇಳಿಕೆ ನೀಡುವ ನಾಯಕರು ವಿಷಯಾಂತರ ಮಾಡದೆ ಮೂರ್ತಿಯ ಅಸಲಿಯತೆಯ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ, ಒಬ್ಬ ವ್ಯಕ್ತಿಯ ರಾಜಕೀಯ ತೆವಲಿಗೆ ಇಡೀ ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ನಿಲ್ಲಲಿ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.