ಉಡುಪಿ : ಮೋದಿ ಉತ್ಸವ ಸಮಿತಿ ಉಡುಪಿ ಜಿಲ್ಲೆ , ದಿವ್ಯಾಂಗ ರಕ್ಷಣಾ ಸಮಿತಿ, ಕೊಡವೂರು. ಬ್ರಾಹ್ಮಣ ಸಮಾಜ, ಕೊಡವೂರು ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ, .ಇದರ ವತಿಯಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 73ನೇ ಹುಟ್ಟುಹಬ್ಬದ ಅಂಗವಾಗಿ 1 ತಿಂಗಳ ಸೇವಾಕಾರ್ಯಕ್ಕೆ ಚಾಲನೆ ನೀಡಲಾಯಿತು
ಮೋದಿ ಉತ್ಸವ – 2023,ಶಿಕ್ಷಕರ ದಿನಾಚರಣೆ ಸನ್ಮಾನ, ಬೃಹತ್ ರಕ್ತದಾನ ಶಿಬಿರ,ಗಾಲಿಕುರ್ಚಿ ವಿತರಣೆ ಸಮಾರಂಭವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಉದ್ಘಾಟಿಸಿ ಶುಭ ಹಾರೈಸಿದರು.
ಸಮಾರಂಭದಲ್ಲಿ ನಗರ ಸಭಾ ಸದಸ್ಯರಾದ ಶ್ರೀ ವಿಜಯ ಕೊಡವೂರು, ಗಣ್ಯರಾದ ಶ್ರೀ ನಾರಾಯಣ ಬಲ್ಲಾಳ್, ಶ್ರೀ ಕಾಳು ಸೇರಿಗಾರ್,ಶ್ರೀ ಅಶೋಕ್ ಶೆಟ್ಟಿಗಾರ್, ಶ್ರೀನಿವಾಸ ಉಪಾಧ್ಯಯ, ಶ್ರೀ ಪ್ರಭಾತ್ ಕೊಡವೂರು, ಶ್ರೀ ದಿನೇಶ್ ಕೊಡವೂರು, ಶ್ರೀ ರಾಧಕೃಷ್ಣ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.