ಉಡುಪಿ : ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರ ಸಂಘದಲ್ಲಿ ನಕಲಿ ಚಿನ್ನ ಅಡವಿಟ್ಟು ಗ್ರಾಹಕನೋರ್ವ 20.62 ರೂ. ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಆದರ್ಶ ಗ್ರಾಹಕರ ವಿವಿದ್ದೋದ್ದೇಶ ಸಹಕಾರ ಸಂಘದ ಕಾರ್ಯದರ್ಶಿ ಜಲೇಂದ್ರ ಕೋಟ್ಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಸಂಘದ ಸದಸ್ಯ ಆಪಾದಿತ ಮಹಮ್ಮದ್ ರಿಯಾಜ್ ಹಲವು ಬಾರಿ ಚಿನ್ನ ಅಡವಿರಿಸಿ ಸಾಲ ಪಡೆದಿದ್ದರು ಎನ್ನಲಾಗಿದೆ.
ಮಹಮ್ಮದ್ ರಿಯಾಜ್ ಸೆಪ್ಟೆಂಬರ್ 5 ರಂದು ತನ್ನ ಹೆಂಡತಿ ಹಾಗೂ ದಾವೂದ್ ಅಬೂಬಕ್ಕರ್ ಎಂಬವರೊಂದಿಗೆ ಕಾರಿನಲ್ಲಿ ಸೊಸೈಟಿಗೆ ಬಂದು 2 ನಕ್ಲೀಸ್ ತಂದು ಸಾಲವನ್ನು ಕೇಳಿದ್ದರು.
ಈ ವೇಳೆ ಅನುಮಾನಗೊಂಡ ಜಲೇಂದ್ರ ಅವರು ಸಂಘದ ಚಿನ್ನ ಪರಿಶೀಲಕರಾದ ಅಶೋಕ್ ಆಚಾರ್ಯರವರಿಂದ ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಚಿನ್ನವೆಂದು ತಿಳಿದು ಬಂದಿದೆ.
ಈ ವೇಳೆ ಆಪಾದಿತರು ತಾವು ಬಂದ ಕಾರನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ನಡುವೆ ಈ ಹಿಂದೆ ಅಡವಿರಿಸಿದ ಎಲ್ಲಾ ಚಿನ್ನಗಳನ್ನು ಪರಿಶೀಲಿಸಿದಾಗ ಅವುಗಳೂ ಸಹ ನಕಲಿ ಎಂದು ತಿಳಿದು ಬಂದಿದೆ.
ಈತ ಜು.17 ರಿಂದ ಫೆ.2 ರ ವರೆಗೆ ಹಂತ ಹಂತವಾಗಿ ಒಟ್ಟು 527.8 ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಒಟ್ಟು 20,62,000 ಹಣವನ್ನು ಸಾಲವಾಗಿ ಪಡೆದು ಸಂಘಕ್ಕೆ ವಂಚಿಸಿದ್ದಾರೆ ಎಂಬುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ