ಕುಂದಾಪುರ : ಬೈಕಿನಲ್ಲಿ ಹೋಗುತ್ತಿದ್ದಾಗಲೇ ಸವಾರನಿಗೆ ಹೃದಯಾಘಾತವಾದ ಪರಿಣಾಮ ನೆಲಕ್ಕುರುಳಿದ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಶೇಡಿಮನೆ ಗ್ರಾಮದ ಬಾಗಳಮಕ್ಕಿ ಎಂಬಲ್ಲಿ ನಿನ್ನೆ ನಡೆದಿದೆ. ಬಾಗಳಮಕ್ಕಿಯ ಶೇಡಿಮನೆ ಚಕ್ಕರಮಕ್ಕಿ ನಿವಾಸಿ ಅಪ್ಪು ಪೂಜಾರಿಯ ಮಗ ಸುಧಾಕರ ಪೂಜಾರಿ(35) ಎಂಬುವವರೇ ಹೃದಯಾಘಾತದಿಂದ ಮೃತಪಟ್ಟ ಬೈಕ್ ಸವಾರ. ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.