ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿ ಮನೆಯೊಂದರಲ್ಲಿ ಕೆಲಸದವರೇ 29.05 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರಾಭರಣಗಳ ಸಹಿತ ನಗದು ಹಾಗೂ ಜಾಗದ ದಾಖಲೆಗಳನ್ನು ಕದ್ದು ಪರಾರಿಯಾಗಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ ಸ್ಥಳೀಯ ನಿವಾಸಿ ರಕ್ಷಾ ವಿ ಶೆಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ.
ಸೆ. 8ರ ಬೆಳಗ್ಗೆ ಮನೆಯ ಕೋಣೆಯಲ್ಲಿದ್ದ 2 ಲಕ್ಷ ರೂ. ನಗದು, ಕೆಲವು ಜಾಗದ ದಾಖಲಾತಿಗಳ ಸಹಿತ ಚಿನ್ನ ಹಾಗೂ ವಜ್ರಾಭರಣಗಳಿರುವ 2 ಲಾಕರ್‌ಗಳನ್ನು ಮನೆಯ ಕೆಲಸದಾಳುಗಳಾದ ರಾಜು ಮತ್ತು ಗೀತಾ ಕಳವು ಮಾಡಿದ್ದಾರೆ.
ಇವುಗಳ ಮೌಲ್ಯ 29.5 ಲಕ್ಷ ರೂ. ಆಗಿದೆ ಎಂಬುದಾಗಿ ರಕ್ಷಾ ವಿ. ಶೆಟ್ಟಿ ಅವರು ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ