ಬೆಂಗಳೂರು: ಬಾಕಿ ಉಳಿದಿರುವ, ರಾಜಿ ಆಗಬಹುದಾದಂತ ಕ್ರಿಮಿನಲ್ ಕೇಸ್ ಗಳು, ಚೆಕ್ ಬೌನ್ಸ್ ಕೇಸ್ ಗಳು ಸೇರಿದಂತೆ ಇತರೆ ಪ್ರಕರಣಗಳಲ್ಲಿ ರಾಜೀಯಾಗುವುದನ್ನು ಪರಿಗಣಿಸಿ, ಕೇಸ್ ಗಳನ್ನು ಕ್ಲಿಯರ್ ಮಾಡುವ ಸಂಬಂಧ ಮುಂಬರುವಂತ ಸೆಪ್ಟೆಂಬರ್.9, 2023ರ ನಾಳೆ ರಾಜ್ಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಡೆಯಲಿದೆ.
ಅದು ಬ್ಯಾಂಕ್ ವಸೂಲಿ ಕೇಸ್, ಕರೆಂಟ್ ಬಿಲ್, ನೀರಿನ ಬಿಲ್, ಕ್ರಿಮಿನಲ್ ಕೇಸ್, ದಾಂಪತ್ಯ ಕುರಿತ ಕೇಸ್, ರಿಯಲ್ ಎಸ್ಟೇಟ್ ಕೇಸ್, ಜಿಲ್ಲಾ ಗ್ರಾಹಕರ ವೇದಿಕೆಯ ಪ್ರಕರಣಗಳು, ಅಪಘಾತ ಪ್ರಕರಣಗಳು, ಕಾರ್ಮಿಕರ ವಿವಾದ, ಭೂ ವಿವಾದದಂತ ಪ್ರಕರಣಗಳಿಗೆ ಸ್ಥಳದಲ್ಲೇ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಇದಲ್ಲದೇ ನೀವು ದಾಖಲಿಸಿದಂತ ಕೇಸ್ ಗಳನ್ನು ಕೂಡ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾಗಿದೆ. ಆಗ ನೀವು ಕೋರ್ಟ್ ಗೆ ಕಟ್ಟಿದಂತ ಹಣ ಕೂಡ ವಾಪಾಸ್ ನೀಡಲಾಗುತ್ತದೆ.
ಕಳೆದ ಬಾರಿ ನಡೆದಂತ ಲೋಕ್ ಅದಾಲತ್ ನಲ್ಲಿ ಸುಮಾರು 31,009 ಪ್ರಕರಣಗಳನ್ನು ರಾಜೀ ಮೂಲಕ, ಕ್ಲಿಯರ್ ಆಗದೇ ಉಳಿದ್ದಂತ 3,879 ಕೇಸ್ ಗಳನ್ನು ಕ್ಲಿಯರ್ ಮಾಡಲಾಗಿತ್ತು.