ಕಾರ್ಕಳ : ಪುರಸಭಾ ವ್ಯಾಪ್ತಿಯ ನೆಕ್ಲಾಜೆ ಕಾಳಿಕಾಂಬ ಪರಿಸರದಲ್ಲಿ ಹಾಡಹಗಲೇ ಚಿರತೆ ಹಾವಳಿಯಿದ್ದು, ಜನ ಆತಂಕಕ್ಕೀಡಾಗಿದ್ದಾರೆ.
ಆಹಾರ ಹುಡುಕಿಕೊಂಡು ನಾಯಿಗಳ, ಜಾನುವಾರುಗಳ ಭೇಟೆಗಾಗಿ ಪದೇ ಪದೆ ಚಿರತೆಗಳು ಕಾಡಿನಿಂದ ನಾಡಿನತ್ತ ಬರುತ್ತಿದೆ. ಆದ್ದರಿಂದ ಜನರು ತಮ್ಮ ಮಕ್ಕಳು ಮತ್ತು ಜಾನುವಾರುಗಳ ರಕ್ಷಣೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಸಂಬಂಧಪಟ್ಟ ಇಲಾಖೆಯವರು ಅಗತ್ಯ ಕ್ರಮವಹಿಸಬೇಕಿದೆ ಎಂದು ಪುರಸಭಾ ಮಾಜಿ ಸದಸ್ಯ ಪ್ರಕಾಶ್ ರಾವ್ ತಿಳಿಸಿದ್ದಾರೆ.