ಉಡುಪಿ : ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಕೃಷ್ಣಪುರ ಮಠಾಧೀಶರು ಕೃಷ್ಣದೇವರಿಗೆ ಅರ್ಘ್ಯ ಪ್ರದಾನ ಮಾಡಿದ್ದಾರೆ. ಅರ್ಘ್ಯ ಪ್ರದಾನದ ಮೂಲಕ ಕೃಷ್ಣದೇವರ ಹುಟ್ಟನ್ನು ಸಂಭ್ರಮಿಸುವ ಆಚರಣೆ ಮಾಡಲಾಗಿದೆ. ಕೃಷ್ಣ ದೇವರ ಗುಡಿಯಲ್ಲಿ ಮತ್ತು ಗುಡಿಯ ಎದುರಿನ ತುಳಸಿ ಕಟ್ಟೆಯಲ್ಲಿ ಅರ್ಘ್ಯ ಪ್ರಧಾನ ಮಾಡಿದ್ದು, ಪರ್ಯಾಯ ಮಠಾಧೀಶ ವಿದ್ಯಾಸಾಗರ ತೀರ್ಥರಿಗೆ ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರ ಸಾಥ್ ನೀಡಿದ್ದಾರೆ.
ಇಂದು ಶ್ರೀ ಕೃಷ್ಣ ಲೀಲೋತ್ಸವದ ಪ್ರಯುಕ್ತ ವಿಟ್ಲಪಿಂಡಿ ಆಚರಣೆ ನಡೆಯಲಿದೆ. ಮಧ್ಯಾಹ್ನದದ ನಂತರ ನಡೆಯುವ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 3 ಗಂಟೆ ವೇಳೆಗೆ ವಿಟ್ಲಪಿಂಡಿ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಗೊಲ್ಲರು ಹುಲಿ ವೇಷದಾರಿಗಳೊಂದಿಗೆ ಆಗಮಿಸಿ ಮೊಸರು ಕುಡಿಕೆ ಒಡೆಯುವ ಮೂಲಕ ಚಾಲನೆ ನೀಡಲಿದ್ದಾರೆ.
ಗುರ್ಜಿ ಕೆಳಗೆ ಆಡುತ್ತಾ ಮೊಸರು ಕುಡಿಕೆ ಒಡೆಯುವ ಮೂಲಕ ಲೀಲೋತ್ಸವಕ್ಕೆ ಚಾಲನೆ ಸಿಗಲಿದೆ. ರಥಬೀದಿ ಸುತ್ತ ಹಾಕಿರುವ ಗುರ್ಜಿ ಕೆಳಗೆ ಗೊಲ್ಲರಿಂದ ಮೊಸರು ಕುಡಿಕೆ ಒಡೆಯವ ಆಟ ನಡೆಯಲಿದೆ. ಗೊಲ್ಲರು ಮೊಸರು ಕುಡಿಕೆ ಒಡೆಯುತ್ತಿದ್ದಂತೆ ಕೃಷ್ಣನ ರಥೋತ್ಸವ ನಡೆಯಲಿದೆ. ಮೂರು ರಥಗಳನ್ನ ಭಕ್ತರು ಎಳೆಯಲಿದ್ದು, ಈ ಸಂಭ್ರಮದ ಕ್ಷಣಕ್ಕೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ.