ಉಡುಪಿ :ದ್ವಿಚಕ್ರ ವಾಹನಗಳ ಮದ್ಯೆ ಢಿಕ್ಕಿ ಸಂಭವಿಸಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಉಡುಪಿಯ ಚಿಟ್ಪಾಡಿ ಬಳಿ ನಡೆದಿದೆ
ಗೋವರ್ಧನ ತಂತ್ರಿ ಅವರು ಬೈಕ್‌ನಲ್ಲಿ ಬೀಡಿನಗುಡ್ಡೆ ಡಯಾನ ಟಾಕೀಸ್ ಮಾರ್ಗವಾಗಿ ಹೋಗುತ್ತಿರುವಾಗ ಚಿಟ್ಪಾಡಿ ಬಳಿ ಬೀಡಿನಗಡ್ಡೆ ಕಡೆಯಿಂದ ಡಯಾನ ಕಡೆಗೆ ಮಹಮ್ಮದ್ ಸರ್ಫರಾಜ್ ಎಂಬಾತ ತನ್ನ ಸ್ಕೂಟರನ್ನು ಅತೀವೇಗದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ
ಪರಿಣಾಮ ಗೋವರ್ಧನ ತಂತ್ರಿಯವರು ಬೈಕ್ ಸಹಿತ ರಸ್ತೆಗೆ ಬಿದ್ದು ಬಲಕಾಲಿನ ಮೊಣಗಂಟಿನ ಬಳಿ ಮೂಳೆಮುರಿತ ಉಂಟಾಗಿದೆ.
ಗಾಯಾಳು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.