ಉಡುಪಿ : ಈ ಬಾರಿ ಶಿರೂರು ಮಠದ ವತಿಯಿಂದ ಅಷ್ಟಮಿ ಹಬ್ಬವನ್ನು ವೈಭವದಿಂದ ಆಚರಿಸಲು ನಿರ್ಧರಿಸಲಾಗಿದೆ.
ಸೆ.6ರ ಬುಧವಾರ ಅಷ್ಠಮಿ ಹಬ್ಬ ನಡೆಯಲಿದ್ದು, ಸೆ.7ರ ಗುರುವಾರ ವಿಟ್ಲ ಪಿಂಡಿ ಉತ್ಸವ ಜರುಗಲಿದೆ
ಶಿರೂರು ಮಠ ಹಿಂದಿನಿಂದಲೂ ಹುಲಿ ವೇಷ ಸಹಿತ ವಿವಿಧ ವೇಷಧಾರಿಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ವರ್ಷ ಕೂಡ ಅಷ್ಟಮಿಯ ಹುಲಿಗಳಿಗಾಗಿ ನೋಟುಗಳ ಮಾಲೆಗಳು ಸಿದ್ಧಗೊಂಡಿವೆ. ಮಠದ ಒಳಗಡೆ ನೋಟಿನ ತೋರಣ ಕಟ್ಟಲಾಗಿದೆ. ಹಬ್ಬದ ದಿವಸ ಬರುವ ಹುಲಿ ವೇಷದಾರಿಗಳಿಗೆ ಶಿರೂರು ಮಠಾಧೀಶರು ನೋಟಿನ ಮಾಲೆ ಸಮರ್ಪಿಸಲಿದ್ದಾರೆ
ಉಡುಪಿ ಶಿರೂರು ಮಠದಲ್ಲಿ ನೋಟುಗಳನ್ನು ಮಾಲೆ ಮಾಡಲಾಗುತ್ತಿದ್ದು, ಶಿರೂರು ಮಠಾಶೀಶರಾದ ವೇದವರ್ಧನ ತೀರ್ಥ ಶ್ರೀಪಾದರು ಪರಿಶೀಲಿಸಿದರು.