ಕಾಪು :ತಾಲೂಕು ಮಟ್ಟದ ದಸರಾ ಕ್ರೀಡಾಕೂಟವು ಸೆ. 12ರಂದು ಕಾಪುವಿನ ಹೆಜಮಾಡಿ ರಾಜೀವ್ ಗಾಂಧಿ ಕ್ರೀಡಾಂಗಣದ ಮೈದಾನದಲ್ಲಿ ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಯ ಒಳಗಾಗಿ ಸಂಘಟಕರಲ್ಲಿ ವರದಿ ಮಾಡಿಕೊಳ್ಳಬಹುದಾಗಿದೆ. ಕ್ರೀಡಾಕೂಟಕ್ಕೆ ಹೆಸರು ಹಾಗೂ ತಂಡಗಳನ್ನು ನೋಂದಾಯಿಸಲು ಸೆ. 9 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಯುವಜನ ಕ್ರೀಡಾಧಿಕಾರಿ, ಕಾಪು ತಾಲೂಕು ಮೊ. ನಂ: 9448770165 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.